ಪುತ್ತೂರು: ಅಂತಾರಾಷ್ಟ್ರೀಯ ಮಟ್ಟದ ‘ಎಲ್ ಇಡಿ ಎಕ್ಸ್ ಪೊ-2024’ ಇತ್ತೀಚೆಗೆ ಮುಂಬಯಿಯಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಪುತ್ತೂರು ಮೂಲದ ಉದ್ಯಮಿ ಪಶುಪತಿ ಶರ್ಮರವರು ಭಾಗವಹಿಸಿದ್ದು ‘ಅತ್ಯುತ್ತಮ ಭಾಗವಹಿಸುವಿಕೆದಾರ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನ್ಯೂಯಾರ್ಕ್ ನ ಐಇ ಎಸ್ಸಂ (The Lighting Authority )ಸ್ಥೆ ಯ ತರಬೇತುದಾರರು ಈ ಕಾರ್ಯಾಗಾರದ ತರಬೇತುದಾರರಾಗಿದ್ದರು. ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಮನೆಯಲ್ಲಿ ಆರೋಗ್ಯಪೂರಿತ ಲೈಟ್ಸ್ ಗಳ ಅಳವಡಿಕೆ, ಲೈಟ್ಸ್ ಗಳ ಬಣ್ಣಗಳನ್ನು ಆಯ್ಕೆ ಮಾಡುವುದು, ಪ್ರಾಜೆಕ್ಟ್ ಗಳಿಗೆ ಸಂಬಂಧಿಸಿದ ಲೈಟ್ಸ್ ಗಳು, ಲೈಟ್ಸ್ ಗಳ ಅಳವಡಿಸುವಿಕೆಯಲ್ಲಿ ಹೊಸತನ, ಹೊಳೆಯುವಿಕೆ ಎಷ್ಟಿರಬೇಕು ಎಂಬಿತ್ಯಾದಿಗಳ ಕುರಿತು ಚರ್ಚೆಗಳು ನಡೆಯಿತು.
ಪಶುಪತಿ ಲೈಟ್ಸ್, ಎಲೆಕ್ಟ್ರಿಕಲ್ ವ್ಯವಹಾರವನ್ನು ಪುತ್ತೂರಿನ ದರ್ಬೆಯಲ್ಲಿರುವ ಫಿಲೋಮಿನಾ ಕಾಲೇಜು ಮುಂಭಾಗದ ಮಳಿಗೆಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಪುತ್ತೂರು ಮತ್ತು ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಲವು ಪ್ರಾಜೆಕ್ಟ್ ಗಳು, ಮನೆಗಳಲ್ಲಿ ವಿದ್ಯುತ್ ದೀಪಗಳ ಅಳವಡಿಕೆಯ ಯೋಜನೆಯೊಂದಿಗೆ ಜಿ.ಎಲ್.ಮಾಲ್,ಜಿ ಎಲ್ ಆಭರಣ ಮಳಿಗೆಗಳು, ಅರುಣ ಕಲಾಮಂದಿರ,ಪಾಪ್ಯುಲರ್ ಸೆಲೆಬ್ರೆಷನ್,ಮಹಾಲಿಂಗೇಶ್ವರ ಸಭಾಭವನ,ಮುಳಿಯ ಜ್ಯುವೆಲ್ಸ್, ಮಂಗಳೂರಿನ ಕಾಕುಂಜೆ ಸಿರಿ,ಪ್ರೆಸ್ಟಿಜ್,ನಿಷ್ಕ ಲೇ ಔಟ್ ಹೀಗೆ ಹಲವು ಪ್ರಾಜೆಕ್ಟ್ ಗಳನ್ನು ಮಾಡಿರುವ ಅನುಭವವನ್ನು ಪಶುಪತಿ ಶರ್ಮ ಹೊಂದಿದ್ದಾರೆ.