ಲ್ಯಾಂಪ್ಸ್ ಸಹಕಾರಿ ಸಂಘ ವಾರ್ಷಿಕ ಮಹಾಸಭೆ-ಕಿರು ಕಾಡುತ್ಪತ್ತಿ ಸಂಗ್ರಹಣೆ ಸದಸ್ಯರಿಗೆ ಅವಕಾಶ ನೀಡುವಂತೆ ಸರಕಾರಕ್ಕೆ ಆಗ್ರಹ

0

ಪುತ್ತೂರು: ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ (ಲ್ಯಾಂಪ್ಸ್) ಸಹಕಾರಿ ಸಂಘದ ಮೂಲ ಉದ್ದೇಶವಾಗಿರುವ ಕಿರು ಕಾಡುತ್ಪತ್ತಿಗಳ ಸಂಗ್ರಹಣೆಗೆ ಸದಸ್ಯರಿಗೆ ಅವಕಾಶ ನೀಡುವಂತೆ ಮತ್ತೆ ಸರಕಾರವನ್ನು ಒತ್ತಾಯಿಸುವಂತೆ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದಾರೆ.


ಸಂಘದ 57ನೇ ವಾರ್ಷಿಕ ಮಹಾಸಭೆಯು ಜೂ.16ರಂದು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ್ ಎಸ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಿರು ಕಾಡುತ್ಪತ್ತಿ ಸಂಗ್ರಹಣೆಗೆ ಸದಸ್ಯರಿಗೆ ಅವಕಾಶ ನೀಡುವಂತೆ ಈಗಾಗಲೇ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವಣೆಯ ಬಗ್ಗೆ ಚರ್ಚಿಸಲಾಯಿತು. ಸಹಕಾರಿ ಸಂಘದ ಮೂಲ ಉದ್ದೇಶವಾಗಿರುವ ಕಿರು ಕಾಡುತ್ಪತ್ತಿ ಸಂಗ್ರಹಣೆಗೆ ಸದಸ್ಯರಿಗೇ ಅವಕಾಶ ನೀಡಬೇಕು. ಈ ಬಗ್ಗೆ ಮತ್ತೆ ಸರಕಾರಕ್ಕೆ ಆಗ್ರಹಿಸುವಂತೆ ಮಹಾಸಭೆಯಲ್ಲಿ ಸದಸ್ಯರ ಒಕ್ಕೊರಲ ಆಗ್ರಹ ವ್ಯಕ್ತವಾಯಿತು.

ರೂ.22ಕೋಟಿ ವ್ಯವಹಾರ, ರೂ.12.46ಲಕ್ಷ ಲಾಭ:
ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಮಾತನಾಡಿ, ಸಂಘವು ವರದಿ ವರ್ಷದಲ್ಲಿ ರೂ.22ಕೋಟಿ ನಡೆಸಿ ರೂ.12.46ಲಕ್ಷ ಲಾಭಗಳಿಸಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.97.81 ಸಾಧನೆ ಮಾಡಿದೆ. ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ವಾರ್ಷಿಕ ಲಾಭಾಂಶವನ್ನು ಉಪ ನಿಬಂಧನೆಯAತೆ ವಿಂಗಡಿಸಲಾಗಿದೆ. ಸದಸ್ಯರು ಸಂಘದ ಮುಖಾಂತರವೇ ಅತೀ ಹೆಚ್ಚು ವ್ಯವಹಾರ ನಡೆಸಿ, ಸಂಘದ ಬೆಳವಣಿಗೆಯಲ್ಲಿ ಸಹಕರಿಸುವಂತೆ ವಿನಂತಿಸಿದರು.
ವರದಿ ವರ್ಷದಲ್ಲಿ ಸಂಘವು ರೂ.45,05,790 ಪಾಲು ಬಂಡವಾಳ ಹಾಗೂ ರೂ.24,15,616 ಸರಕಾರದ ಪಾಲು ಬಂಡವಾಳವಿರುತ್ತದೆ. ರೂ.1,08,96,107 ಸಂಚಯ ಠೇವಣಿ, ರೂ.9,55,450 ಮಾಸಿಕ ಠೇವಣಿ, ರೂ.3,89,06,946 ನಿರಖು ಠೇವಣಿ, ರೂ.60,76,099 ಸ್ವರ್ಣ ನಿತ್ಯನಿಧಿ ಠೇವಣಿ, ರೂ.1,49,55,622.54 ಇತರ ನಿಧಿಗಳನ್ನು ಹೊಂದಿರುತ್ತದೆ. ವಿವಿಧ ಬ್ಯಾಂಕ್‌ಗಳಲ್ಲಿ ರೂ.2,39,71,992.89 ಧನವಿನಿಯೋಗ ಮಾಡಲಾಗಿದೆ. ರೂ.61,500ನ್ನು ವಿವಿಧ ಬ್ಯಾಂಕ್‌ಗಳಲ್ಲಿ ಪಾಲು ಬಂಡವಾಳದಲ್ಲಿ ವಿನಿಯೋಗಿಸಲಾಗಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ಒಟ್ಟು ರೂ.4,02,92,901 ಸಾಲ ವಿತರಿಸಲಾಗಿದ್ದು ಶೇ.97.81 ಸಾಲ ವಸೂಲಾತಿಯಾಗಿರುತ್ತದೆ ಎಂದು ಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್ ವರದಿಯಲ್ಲಿ ತಿಳಿಸಿದರು.


ಬೈಲಾ ತಿದ್ದುಪಡಿಗೆ ಮಹಾಸಭೆ ಒಪ್ಪಿಗೆ:
ಸಂಘದಲ್ಲಿ ಖಾಲಿಯಾಗುವ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲು ಹಾಗೂ ಸಂಘದ ವ್ಯವಹಾರ ವಿಸ್ತರಣೆಗೆ ಅನುಗುಣವಾಗಿ ಬೈಲಾ ತಿದ್ದುಪಡಿಯ ಬಗ್ಗೆ ಪ್ರಸ್ತಾಪಿಸಿ ಮಹಾಸಭೆಯ ಅನುಮತಿ ಪಡೆದುಕೊಳ್ಳಲಾಯಿತು.


ಸನ್ಮಾನ:
ಸಂಘದ ಹಿರಿಯ ಸದಸ್ಯರಾದ ಗೋವಿಂದ ನಾಯ್ಕ ನೈತ್ತಾಡಿ, ಸುಂದರಿ ಬೋಳೋಡಿ ಕೆದಂಬಾಡಿ, ಹುಕ್ರಪ್ಪ ನಾಯ್ಕ ನನ್ಯ ಕಾವು, ಕೊರಗಪ್ಪ ನಾಯ್ಕ ಪಟ್ಟೆ ಬಡಗನ್ನೂರು ಇವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.


ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾ ಮಂಡಲದ ಉಪಾಧ್ಯಕ್ಷರು, ಸಂಘದ ನಿರ್ದೇಶಕರಾಗಿರುವ ಮಂಜುನಾಥ ಎನ್.ಎಸ್ ಮಾತನಾಡಿ, ಸಂಘದ ಉದ್ದೇಶ, ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ ಸದಸ್ಯರು ಸಂಘದ ಮೂಲಕ ವ್ಯವಹರಿಸಿ, ಸಂಘದ ಬೆಳವಣಿಗೆಯಲ್ಲಿ ಸಹಕರಿಸುವಂತೆ ತಿಳಿಸಿದರು.ನಿರ್ದೇಶಕರಾದ ಪೂವಪ್ಪ ನಾಯ್ಕ ಕೆ. ಮಾಡ್ನೂರು, ಅಪ್ಪಯ್ಯ ನಾಯ್ಕ ತಳೆಂಜಿ, ಕೃಷ್ಣ ನಾಯ್ಕ ಪಿ.ಎಂ. ಕೃಷ್ಣನಗರ, ನೇತ್ರಾಕ್ಷ ಏಣಿತ್ತಡ್ಕ, ಶೇಷಪ್ಪ ನಾಯ್ಕ ದೊಡ್ಡಡ್ಕ, ಅಶ್ವಿನಿ ಬಿ.ಕೆ ಮುಂಡೂರು, ಭವ್ಯ ಚಿಕ್ಕಮುಡ್ನೂರು, ರೇವತಿ ನಿಡ್ಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಿಬಂದಿ ಭವ್ಯ ಪ್ರಾರ್ಥಿಸಿದರು. ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್. ವಾರ್ಷಿಕ ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ಉಪಾಧ್ಯಕ್ಷ ಧರ್ಣಪ್ಪ ನಾಯ್ಕ ಉಪ್ಪಿನಂಗಡಿ ವಂದಿಸಿದರು. ಸಿಬಂದಿಗಳಾದ ಹೊನ್ನಪ್ಪ ನಾಯ್ಕ, ಸೇಸಪ್ಪ ನಾಯ್ಕ, ಬಾಬು ನಾಯ್ಕ ಹೆಚ್., ನಾಣ್ಯಪ್ಪ ಪಿ., ಪೂವಪ್ಪ ನಾಯ್ಕ, ರವಿಕಲಾ ಟಿ.ನಾಯ್ಕ, ಸುಮನ್‌ರಾಜ್ ಆರ್. ಹರೀಶ್ ನಾಯ್ಕ, ಕೃಷ್ಣಪ್ಪ ನಾಯ್ಕ, ಪಿಗ್ಮಿಸಂಗ್ರಾಹಕರಾದ ರಾಮಣ್ಣ ನಾಯ್ಕ ಹಾಗೂ ಶೇಖರ ನಾಯ್ಕ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನೆರವೇರಿತು.

LEAVE A REPLY

Please enter your comment!
Please enter your name here