ನೆಲ್ಯಾಡಿ: ಬೆಥನಿ ಧರ್ಮ ಸೇವಾ ಸಂಘ ನೆಲ್ಯಾಡಿ ಇದರ ಆಡಳಿತಕ್ಕೊಳಪಟ್ಟ ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ 2024ನೇ ಸಾಲಿನ ವಿವಿಧ ಕೋರ್ಸುಗಳಿಗೆ ದಾಖಲಾತಿ ಆರಂಭಗೊಂಡಿದೆ.
ಭಾರತ ಸರಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತಿನಿಂದ ಸಂಯೋಜನೆಗೊಂಡಿರುವ ವಿವಿಧ ವೃತ್ತಿಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತೀರ್ಣ ಯಾ ಅನುತ್ತೀರ್ಣಗೊಂಡ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಚೇರಿ ಅಥವಾ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಇತರೇ ಪ್ರವರ್ಗಗಳಿಗೆ ಸರಕಾರದ ಮೀಸಲಾತಿ ನಿಯಮದಂತೆ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ 1 ವರ್ಷದ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಕೋರ್ಸು, ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ಫೈಲ್ ಆದವರಿಗೆ 1 ವರ್ಷದ ವೆಲ್ಡರ್ ಕೋರ್ಸು ಹಾಗೂ ಎಸ್‌ಎಸ್‌ಎಲ್‌ಸಿ ಉತ್ತೀರ್ಣಗೊಂಡವರಿಗೆ ತಲಾ 2 ವರ್ಷದ ಎಲೆಕ್ಟ್ರೀಷನ್, ಎಲೆಕ್ಟ್ರೋನಿಕ್ ಮೆಕ್ಯಾನಿಕ್, ಫಿಟ್ಟರ್ ಹಾಗೂ ಮೆಕ್ಯಾನಿಕ್ ಮೋಟಾರ್ ವೆಹಿಕಲ್ ಕೋರ್ಸುಗಳಿಗೆ ದಾಖಲಾತಿ ಆರಂಭಗೊಂಡಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಮೊಬೈಲ್ ಸಂಖ್ಯೆ-8951400822, 9448824153ಗೆ ಸಂಪರ್ಕಿಸುವಂತೆ ಶಾಲಾ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.