ಕೂರೇಲು ಶ್ರೀ ಮಲರಾಯ ದೈವಸ್ಥಾನ, ನಾಗಸಾನ್ನಿಧ್ಯ ಅಭಿವೃದ್ಧಿ ಚಿಂತನೆ – ತಾಂಬೂಲ ಪ್ರಶ್ನೆ, ಕೂರೇಲು ಕುಟುಂಬಸ್ಥರ ಸಭೆ

0

ಪುತ್ತೂರು: ಆರ್ಯಾಪು ಗ್ರಾಮದ ಕೂರೇಲು ಮಣ್ಣಿನಲ್ಲಿ ನೆಲೆಯಾಗಿರುವ ಬಹಳ ಕಾರಣಿಕತೆಯನ್ನು ಹೊಂದಿರುವ ಕೂರೇಲು ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವ ಶ್ರೀ ಮಲರಾಯ ದೈವ ಹಾಗೂ ಮಲರಾಯ ಬಂಟ ಮಹಿಷಂತಾಯ ದೈವಗಳು ಸೇರಿದಂತೆ ಪರಿವಾರ ದೈವಗಳ ಆರಾಧನ ಕ್ಷೇತ್ರ ಶ್ರೀ ಮಲರಾಯ ದೈವಸ್ಥಾನವು ಬ್ರಹ್ಮಕಲಶೋತ್ಸವ ನಡೆದು ಸುಮಾರು 17 ವರ್ಷಗಳು ಕಳೆದಿದ್ದು ಆ ಬಳಿಕ ಬಹಳಷ್ಟು ಅಭಿವೃದ್ಧಿ ಕೆಲಸಗಳು ದೈವಸ್ಥಾನದಲ್ಲಿ ನಡೆದಿದೆ. ಇದೀಗ ದೈವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು ಹಾಗೇ ಕೂರೇಲು ನಾಗ ಸಾನ್ನಿಧ್ಯದ ಅಭಿವೃದ್ಧಿ ಮತ್ತು ಕೂರೇಲು ತರವಾಡು ಮನೆ ಅಭಿವೃದ್ಧಿ ಬಗ್ಗೆ ಶ್ರೀ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರ ಮನೆಯಲ್ಲಿ ಜೂ.9ರಂದು ಕೇರಳದ ಜ್ಯೋತಿಷ್ಯರಾದ ಲಕ್ಷ್ಮೀನಾರಾಯಣ ಮತ್ತು ತಂಡದವರಿಂದ ತಾಂಬೂಲ ಪ್ರಶ್ನಾ ಚಿಂತನೆಯು ನಡೆಯಿತು. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿರುವ ವಿಚಾರಗಳ ಬಗ್ಗೆ ಕೂರೇಲು ಕುಟುಂಬಸ್ಥರ ಸಭೆಯು ಜೂ.16ರಂದು ಸಂಜೀವ ಪೂಜಾರಿಯವರ ಮನೆಯಲ್ಲಿ ನಡೆಯಿತು. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕೂರೇಲು ನಾಗ ಸಾನಿಧ್ಯವನ್ನು ಸಂಪೂರ್ಣ ಜೀರ್ಣೋದ್ಧಾರ ಮಾಡುವುದು ಎಂದು ನಿರ್ಣಯಿಸಲಾಯಿತು. ಇದಲ್ಲದೆ ಕೂರೇಲು ಶ್ರೀ ಮಲರಾಯ ದೈವಸ್ಥಾನ, ಕೂರೇಲು ತರವಾಡು ಮನೆಯ ಅಭಿವೃದ್ಧಿ ಬಗ್ಗೆಯೂ ಚಿಂತನೆ ನಡೆಸಲಾಯಿತು. ಶಿಲ್ಪಿ ರಮೇಶ ಕಾರಂತ ಬೆದ್ರಡ್ಕರವರ ಮಾರ್ಗದರ್ಶನದಂತೆ ಅಭಿವೃದ್ಧಿ ಕೆಲಸಗಳನ್ನು ನಡೆಸುವುದು ಎಂದು ನಿರ್ಣಯಿಸಲಾಯಿತು. ಅಭಿವೃದ್ಧಿ ಕೆಲಸಗಳಿಗೆ ಸುಮಾರು 15 ಲಕ್ಷ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಲಾಯಿತು. ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿಯವರು ಕುಟುಂಬಸ್ಥರು, ಬಂಧುಮಿತ್ರರನ್ನು ಸ್ವಾಗತಿಸಿ ವಿಚಾರಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಹರ್ಷಿತ್ ಕೂರೇಲು, ಸರಸ್ವತಿ ಸಂಜೀವ ಪೂಜಾರಿ ಸೇರಿದಂತೆ ಕೂರೇಲು ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.



ಜು.೦7: ನಾಗ ಸಾನಿಧ್ಯದ ಜೀರ್ಣೋದ್ಧಾರ ಆರಂಭ
ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕೂರೇಲು ನಾಗ ಸಾನಿಧ್ಯದ ಸಂಪೂರ್ಣ ಜೀರ್ಣೋದ್ಧಾರ ನಡೆಯಲಿದೆ. ಜು.07 ರಂದು ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ನಾಗ ಸಾನಿಧ್ಯದಲ್ಲಿ ನಾಗ ದೇವರನ್ನು ಬಾಲಾಲಯದಲ್ಲಿ ಇರಿಸುವ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ನಾಗ ಸಾನಿಧ್ಯದ ಸಂಪೂರ್ಣ ಜೀರ್ಣೋದ್ಧಾರಗೊಂಡು ಮುಂದೆ ನಾಗ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here