ಪುತ್ತೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು, ಪಾಣಾಜೆ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಪ್ರಯುಕ್ತ ನಮ್ಮ ತ್ಯಾಜ್ಯ ನಮ್ಮ ಹೊಣೆ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರತಿ ವಾಣಿಜ್ಯ ಮಳಿಗೆ ಮತ್ತು ವಾಸದ ಮನೆಗಳಿಗೆ ಒಣ ಕಸ ಸಂಗ್ರಹ ಚೀಲ ವಿತರಣೆ ಮಾಡುವ ಅಭಿಯಾನ ಕಾರ್ಯಕ್ರಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನತುಲ್ ಮೆಹ್ರಾ ರವರ ನೇತೃತ್ವದಲ್ಲಿ ಜರುಗಿತು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ.ಕ ಜಿಲ್ಲಾಧ್ಯಕ್ಷ ಡಾ.ಹಾಜಿ ಎಸ್ ಅಬೂಬಕರ್ ಆರ್ಲಪದವು ರವರ ನಿವಾಸಕ್ಕೆ ತೆರಳಿ ಒಣ ಕಸ ಸಂಗ್ರಹ ಚೀಲ ವಿತರಣೆ ಮಾಡಲಾಯಿತು. ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ, ಸ್ವಚ್ಛತಾ ವಾಹಿನಿಯ ನಿರ್ವಾಹಕಿ ಚಂದ್ರಾವತಿ ಮತ್ತು ಸುಮತಿ, ಸ್ವಚ್ಛತ ವಾಹಿನಿಯ ಚಾಲಕಿ ಪೌಲಿನ್ ಮೊಂತೆರೋ, ಸಮೃದ್ಧಿ ಸಂಜೀವಿನಿಯ ಮುಖ್ಯ ಪುಸ್ತಕ ಬರಹಗಾರರಾದ ನವಿತಾ, ಸಮೃದ್ಧಿ ಸಂಜೀವಿನಿ ಒಕ್ಕೂಟದ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಯಶೋದ ಉಪಸ್ಥಿತರಿದ್ದರು.