ಅರಿಯಡ್ಕ: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಮತ್ತು ತಾಲೂಕು ಯುವಜನ ಒಕ್ಕೂಟ ರಿ. ಪುತ್ತೂರು ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ರಿ. ಕೌಡಿಚ್ಚಾರು ಇವುಗಳ ಸಹಯೋಗದಲ್ಲಿ ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಪುರಸ್ಕೃತ ವಿವೇಕಾನಂದ ಯುವಕ ವೃಂದ ರಿ. ಕೌಡಿಚ್ಚಾರು ಅರಿಯಡ್ಕ ಇದರ ಆಶ್ರಯದಲ್ಲಿ, ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಸಭಾ ಭವನದಲ್ಲಿ, ಜೂ.21ರಂದು ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಎ.ರಾಮದಾಸ ರೈ ಮದ್ಲ ಅವರು ದೀಪ ಬೆಳಗಿಸಿ ಕಾರ್ಯ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಗ್ರಾಮ ಪಂಚಾಯತ್ ಅರಿಯಡ್ಕ ಇದರ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಶು ಪಾಲನಾ ಇಲಾಖೆಯ ನಿವೃತ ನಿರ್ದೇಶಕ ಡಾ. ಸುರೇಶ್ ಭಟ್ ಕೌಡಿಚ್ಚಾರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ವೃಂದದ ಅಧ್ಯಕ್ಷ ಉದಯ ಕುಮಾರ್ ಆಕಾಯಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಯೋಗ ಶಿಕ್ಷಕ ನವೀನ್ ಕುಮಾರ್ ಯೋಗ ಹಾಗೂ ಆರೋಗ್ಯದ ಬಗ್ಗೆ ಮಾಹಿತಿಯ ಜೊತೆಗೆ 1 ಗಂಟೆಗಳ ಯೋಗ ತರಬೇತಿಯನ್ನು ನೀಡಿದರು.
ಈ ಕಾರ್ಯಕ್ರಮವನ್ನು ಪದ್ಮನಾಭ ಆಚಾರ್ಯ ಶೇಖಮಲೆ ಪ್ರಾರ್ಥಿಸಿ, ದೀಪಕ್ ಕುಲಾಲ್ ಸ್ವಾಗತಿಸಿ, ದುರ್ಗಾಪ್ರಸಾದ್ ಕುತ್ಯಾಡಿ ವಂದಿಸಿದರು, ಚರಣ್ ರಾಜ್ ಎಂ.ಡಿ. ಹೊಸಗದ್ದೆ ಕಾರ್ಯಕ್ರಮ ನಿರೂಪಸಿದರು, ಕಾರ್ಯಕ್ರಮದಲ್ಲಿ, ವಸಂತ ಕುಲಾಲ್ ಆಕಾಯಿ, ಮುಕುಂದ ನಾಯ್ಕ ದೇವುಮೂಲೆ, ಹರಿಶ್ಚಂದ್ರ ಆಚಾರ್ಯ ಹೊಸಗದ್ದೆ, ಸುಕುಮಾರ್ ಕರ್ಕೇರ ಮಡ್ಯಂಗಳ, ದುರ್ಗಾಪ್ರಸಾದ್ ನಾಯ್ಕ ಮುಂಗ್ಲಿಮೂಲೆ, ಚಂದ್ರ ಜಿ ಕುತ್ಯಾಡಿ, ವಸಂತ ಕುಮಾರ್ ಕೌಡಿಚ್ಚಾರು, ಜಯಪ್ರಕಾಶ್ ಕುತ್ಯಾಡಿ, ಸಾತ್ವಿಕ್ ಆಚಾರ್ಯ ಹೊಸಗದ್ದೆ ಸಹಕರಿಸಿದರು. ಉಚಿತ ಯೋಗ ಶಿಬಿರವು 3 ದಿನಗಳ ನಡೆಯಲಿದ್ದು ಜೂ.23ನೇ ಆದಿತ್ಯವಾರ ಸಮಾರೋಪಗೊಳ್ಳಲಿದೆ.