ಪುತ್ತೂರು : ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿ ಯೋಗ ಪ್ರಮುಖ್ ಹಾಗೂ ಸಂಪನ್ಮೂಲ ವ್ಯಕ್ತಿಯಾದ ವಿಜಯ್ ಗಣೇಶ್ ಇವರು ಮಾತನಾಡುತ್ತಾ, ಆತ್ಮಜ್ಞಾನವೇ ಮನುಷ್ಯ ಜೀವನದ ಸೂತ್ರ. ಯೋಗದಿಂದ ಆತ್ಮ ಸಾಕ್ಷಾತ್ಕಾರವಾಗುತ್ತದೆ. ಮನುಷ್ಯನ ಅಹಮಿಕೆ ನಾಶ ಆಗುವುದೇ ಯೋಗದ ಫಲ ಎಂದು ಪ್ರಾಯೋಗಿಕವಾಗಿ ಯೋಗವನ್ನು ಪ್ರದರ್ಶಿಸಿ, ಅದರ ಮಹತ್ವವನ್ನು ತಿಳಿಸಿಕೊಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಪ್ರಕಾಶ್ ಚಂದ್ರ ಯೋಗ ಎಂಬುದು ದೈಹಿಕ ಬದಲಾವಣೆಯ ತಳಹದಿ ಎಂದರು.
ಶಾಲಾ ಪ್ರಾಂಶುಪಾಲಸಿಂಧು ವಿ. ಜಿ ಉಪಸ್ಥಿತರಿದ್ದು ಸ್ವಾಗತಿಸಿದರು. ಶಾಲಾ ಶಿಕ್ಷಕಿ ಲತಾಶಂಕರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಏಳನೇ ತರಗತಿಯ ವಿದ್ಯಾರ್ಥಿನಿಯರಾದ ಮೇಧಾ ಭಟ್ ನಿರೂಪಿಸಿ, ಪ್ರಣಮ್ಯ ವಂದಿಸಿದರು. ಶಾಲಾ ದೈಹಿಕ ಶಿಕ್ಷಕ ನವೀನ್ ಹಾಗೂ ಶ್ಯಾಮಲಾ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.