ಕಾಣಿಯೂರು: ಸರಕಾರಿ ಶಾಲೆ ಉಳಿಯ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಪಳ್ಳತ್ತಾರು ಶಾಲೆಯ ಎಸ್ ಡಿ ಎಂ ಸಿ ಹಾಗೂ ಪೋಷಕರ ಸಹಕಾರದಿಂದ ಪೂರ್ವ ಪ್ರಾಥಮಿಕ ತರಗತಿ ಎಲ್ ಕೆ ಜಿ -ಯು ಕೆ ಜಿ ಆರಂಭಿಸಲಾಗಿದ್ದು, ತರಗತಿ ನಡೆಸಲು ಸ್ಥಳಾವಕಾಶದ ಕೊರತೆಯಾದಾಗ ಊರ ಹಾಗೂ ಪರವೂರ ದಾನಿಗಳ ನೆರವಿನಿಂದ ಸುಮಾರು ಒಂದುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲು ತೀರ್ಮಾನಿಸಿ, ಕೊಠಡಿ ಕಟ್ಟಡದ ಕೆಲಸ ಆರಂಭಿಸಿದಾಗ ಪಳ್ಳತ್ತಾರು ಶಾಲೆಯ ಹಿರಿಯ ವಿದ್ಯಾರ್ಥಿಗಳು ಜೂ 21 ರಂದು ಶಾಲೆಯ ಅಭಿವೃದ್ಧಿಗಾಗಿ ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ಎಸ್. ಡಿ. ಎಂ.ಸಿ ಅಧ್ಯಕ್ಷ ಉಮರ್ ಶಾಫಿ, ಎಸ್. ಡಿ.ಎಂ.ಸಿ ಕೇಂದ್ರ ಸಮಿತಿಯ ನಿರ್ದೇಶಕ ನವಾಝ್ ಸಖಾಫಿ, ಉಮೇಶ್ ಬನಾರಿ, ಹನೀಫ್ ಪಾರೆ, ಮರ್ಶಾದ್ ಗುಂಡಿನಾರು,ರಫೀಕ್ ಗುಂಡಿನಾರು, ಜಾಬಿರ್ ಪಳ್ಳತ್ತಾರು, ಸಿನಾನ್ ಬನಾರಿ, ರಾಶಿದ್ ದೇವರಗುಡ್ಡೆ, ರಝಾಕ್ ಪಳ್ಳತ್ತಾರು, ಸಹೀದ್ ಕೂಂಕ್ಯ,ಸಂಸುದ್ದೀನ್ ಏರಿಮಾರ್, ಹಂಝು ಗುಂಡಿನಾರು, ಅನಸ್ ಕೂಂಕ್ಯ ಮೊದಲಾದವರು ಭಾಗವಹಿಸಿದ್ದರು.