ಅರಫಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆ

0

ಉಪ್ಪಿನಂಗಡಿ: ಇಲ್ಲಿನ ಅರಫಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.


ವಿದ್ಯಾರ್ಥಿನಿ ಆಯಿಷತ್ ನಿಶಾನ ಮಾತನಾಡಿ, ದೇಹ ಮತ್ತು ಮನಸ್ಸು ಸ್ವಸ್ಥ್ಯವಾಗಿಡಲು ಯೋಗದಿಂದ ಸಾಧ್ಯವಿದೆ. ಯೋಗವೆಂದರೆ ಔಷಧ ರಹಿತ ಪದ್ಧತಿ ಎಂದರು. 1ನೇ ತರಗತಿಯ ವಿದ್ಯಾರ್ಥಿನಿ ಆಯಿಷತ್ ಶಂಝ ಅವರು ಯೋಗದಿಂದ ಆಗುವ ಪ್ರಯೋಜನದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಅಮಲ್ ಸೂಚನೆಯಂತೆ ವಿದ್ಯಾರ್ಥಿಗಳಾದ ಸಿಮಕ್, ಶಾಹಿದ್, ರಾಬಿಯಾ, ನಸೀಬರವರ ನೇತೃತ್ವದಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿವಿಧ ಯೋಗ ಭಂಗಿ ಪ್ರದರ್ಶಿಸಿದರು. ಮರೀಹ ಸಜ್‌ಲ ನಿರೂಪಿಸಿದರು. ಆಯಿಷ ಸಮನ್ ವಂದಿಸಿದರು. ಶಾಲಾ ಮುಖ್ಯಶಿಕ್ಷಕಿ ಕವಿತರವರ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಯೋಗ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

LEAVE A REPLY

Please enter your comment!
Please enter your name here