ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

0

ವಿದ್ಯಾರ್ಥಿಗಳು ಉದಾತ್ತ ಚಿಂತನೆಯೊಂದಿಗೆ ನಿರಂತರ ಪ್ರಗತಿಗೆ ಶ್ರಮಿಸಬೇಕು-ಡಾ|ಶಶಿಕಲಾ

ಪುತ್ತೂರು: ಆಧುನಿಕ ಜಗತ್ತು ವಿವಿಧ ಪಂಥಾಹ್ವಾನಗಳನ್ನು ನಮ್ಮ ಮುಂದಿಡುತ್ತಿದೆ. ಈ ಸವಾಲುಗಳನ್ನು ಎದುರಿಸಲು ನಾವೆಲ್ಲರೂ ಶ್ರಮಿಸುತ್ತಾ ಇರುತ್ತೇವೆ, ಆದರೆ ನಾವು ನಮ್ಮ ಪರಿಶ್ರಮದಲ್ಲಿ ಉದಾತ್ತವಾಗಿರಲು ಮರೆಯಬಾರದು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಟ್ಲದ ಪ್ರಾಧ್ಯಾಪಕರಾದ ಡಾ.ಶಶಿಕಲಾರವರು ಹೇಳಿದರು. ಅವರು ಇತ್ತೀಚೆಗೆ ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮಾಡುತ್ತಾ  ಮಾತನಾಡಿದರು.

ಮುಖ್ಯ ಅತಿಥಿ, ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೊ|.ಝೇವಿಯರ್ ಡಿ’ಸೋಜರವರು ಮಾತನಾಡಿ, ಆದಷ್ಟು ಶೀಘ್ರದಲ್ಲಿ ಕಾಲೇಜಿನ ಆಧುನಿಕ ಕಟ್ಟಡ ಪೂರ್ತಿಯಾಗಿ ಕಾಲೇಜಿಗೆ ಇನ್ನಷ್ಟು ಮಕ್ಕಳು ಭರ್ತಿಯಾಗುವಂತಾಗಲಿ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ.ಐವನ್ ಫ್ರಾನ್ಸಿಸ್ ಲೋಬೋರವರು ಪ್ರತಿಜ್ಞಾವಿಧಿ ಬೋಧಿಸಿದರು. 2025-26 ನೇ ಸಾಲಿನ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ವೇದಶ್ರೀ ನಿಡ್ಯರವರು ಕಳೆದ 12 ವರ್ಷಗಳಲ್ಲಿ ಕಾಲೇಜು ಸಾಧಿಸಿರುವ ಪ್ರಗತಿಯ ಕುರಿತು ವಿವರಿಸಿದರು. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಸ್ಟೀವನ್ ಕ್ವಾಡ್ರಸ್ ರವರು ಪ್ರಸ್ತಾವನಾ ಭಾಷಣ ಮಾಡಿದರು.

ಕುಮಾರಿ ಭೂಮಿಕ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕುಮಾರಿ ಚಿಂತನ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಕುಮಾರಿ ಕೀರ್ತನಾ ವಂದಿಸಿದರು. ವಂದನಾರ್ಪಣೆ ಮಾಡಿದರು. ಕುಮಾರಿ ದಿಶಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here