![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2024/06/vijayalakshmi.jpg)
ಪುತ್ತೂರು: ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿ| ಸಿ.ಪಿ ಜಯರಾಮ ಗೌಡ ಅವರ ಅಕ್ಕ ವಿಟ್ಲ ಕಾಯರ್ಮಾರ್ ಮೂಲದ ವಿಜಯಲಕ್ಷ್ಮೀ ಕಾಯರ್ಮಾರ್(79ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಬೆಂಗಳೂರಿನ ನಿವಾಸದಲ್ಲಿ ಜೂ.29ರಂದು ನಿಧನರಾದರು.
ವಿಟ್ಲದ ಕಾಯರ್ಮಾರ್ ದಿ| ಡಾ. ವೀರಪ್ಪ ಗೌಡರ ಸೊಸೆಯಾಗಿರುವ ವಿಜಯಲಕ್ಷ್ಮೀ ಕಾಯರ್ಮಾರ್ ಅವರು ಪತಿ ರಾಜಗೋಪಾಲ್ ಕೆ.ವಿ ಅವರೊಂದಿಗೆ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿದ್ದರು. ಅಲ್ಲಿ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಮೃತರು ಪತಿ ರಾಜಗೋಪಾಲ್ ಕೆ.ವಿ, ಪುತ್ರ ವಿವೇಕ್, ಪುತ್ರಿಯರಾದ ಪೂರ್ಣಿಮಾ, ಸುಶ್ಮಾ, ಸೊಸೆ ಕಲ್ಪನಾ, ಅಳಿಯಂದಿರಾದ ಶಶಿಧರ್, ಸುಜಯ್ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.