ಪುತ್ತೂರು: ಜುಲೈ 1ರ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಪ್ರಯುಕ್ತ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕದ ವತಿಯಿಂದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರನ್ನು ಗೌರವಿಸಲಾಯಿತು.
ಡಾ.ಯು.ಪಿ.ಶಿವಾನಂದರವರು ವೃತ್ತಿಯಲ್ಲಿ ವೈದ್ಯರಾಗಿದ್ದು ಕಳೆದ 36 ವರ್ಷಗಳಿಂದ ಸುದ್ದಿ ಸಮೂಹ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಪತ್ರಿಕಾ ರಂಗದಲ್ಲಿ ಇವರ ಪರಿಶ್ರಮ ಹಾಗೂ ಸೇವೆಯನ್ನು ಗುರುತಿಸಿ ಶಲ್ಯ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಡಾ.ಯು.ಪಿ.ಶಿವಾನಂದರವರು ಮಾತನಾಡಿ ಪತ್ರಿಕೆ ನಡೆದು ಬಂದ ದಾರಿಯನ್ನು ತಿಳಿಸಿದರು. ಸಂಘದ ಅಧ್ಯಕ್ಷೆ ಶೈಲಜಾ ಸುದೇಶ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು ಸ್ವಾಗತಿಸಿ ಉಪಾಧ್ಯಕ್ಷ ಪಿ.ಸದಾಶಿವ ಭಟ್ ವಂದಿಸಿದರು. ಸಂಘದ ಕೋಶಾಧಿಕಾರಿ ಕವಿತಾ, ಜತೆ ಕಾರ್ಯದರ್ಶಿ ದಿಲ್ಶಾನ, ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಸಂತೊಷನಗರ, ಸದಸ್ಯರುಗಳಾದ ಶರತ್ ಕುಮಾರ್, ತಿಲಕ್ ರೈ, ಸದಾಶಿವ ಶೆಟ್ಟಿ, ಮೋಹನ್ ಶೆಟ್ಟಿ, ಶ್ರೀಧರ್ ರೈ, ನರೇಶ್ ಜೈನ್, ರಕ್ಷಿತಾ ಎಚ್. ನಾಯ್ಕ್, ಅಕ್ಷತಾ, ಕಾವ್ಯ, ಚಿತ್ರಾಂಗಿನಿ, ಪ್ರೀತ, ಜಯಲಕ್ಷ್ಮಿ, ಶ್ವೇತಾ, ಶಿವಕುಮಾರ್, ಪ್ರಜ್ವಲ್, ಪ್ರಶಾಂತ್, ರಮೇಶ್ ಕೆಮ್ಮಾಯಿ ಉಪಸ್ಥಿತರಿದ್ದರು.