ಫಿಲೋಮಿನಾ ಗಣೇಶೋತ್ಸವಕ್ಕೆ 42ರ ಸಂಭ್ರಮ-ಜು.9:ಫಿಲೋ ಗಣಪನಿಗೆ ನೂತನ ಪೀಠ ಸಮರ್ಪಣೆ, ವಿಗ್ರಹ ಮುಹೂರ್ತ

0

ಪುತ್ತೂರು:ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗೊಳಪಟ್ಟ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ 1983ರಲ್ಲಿ ಪ್ರಾರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ 42ನೇ ವರ್ಷದ ಸಂಭ್ರಮವಾಗಿದೆ.


ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಮಿತ್ರರು ಹಾಗೂ ಪುತ್ತೂರು ಸಾರ್ವಜನಿಕರ ಸಹಕಾರದಿಂದ ಅದ್ದೂರಿಯಾಗಿ ನಡೆಸಲ್ಪಡುವ ಗಣೇಶೋತ್ಸವ ಜು.9 ರಂದು ಬೆಳಿಗ್ಗೆ ಪರ್ಲಡ್ಕದ ಏಕದಂತ ವಠಾರದಲ್ಲಿ ಫಿಲೋ ಗಣಪನಿಗೆ ನೂತನ ಪೀಠ ಸಮರ್ಪಣೆ ಹಾಗೂ ವಿಗ್ರಹ ರಚನೆಕಾರ ತಾರಾನಾಥ ಆಚಾರ್ಯರವರ ನೇತೃತ್ವದಲ್ಲಿ ಪೂಜಾ ಕಾರ್ಯದೊಂದಿಗೆ ವಿಗ್ರಹ ಮುಹೂರ್ತ ಜರಗಲಿದೆ. ಈ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿಗಳು ಹಾಗೂ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಮಿತ್ರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಲೀಸಬೇಕಾಗಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here