ಪುತ್ತೂರು: ಏಷ್ಯಾದ ನಂಬರ್ ವನ್ ಪೈಂಟ್ ಎಂಬ ಹೆಗ್ಗಳಿಕೆಗೆ ಪಡೆದಿರುವ ನಿಪ್ಪಾನ್ ಪೈಂಟ್‌ನ ಮಳಿಗೆ ಗಜಾನನ ಟ್ರೇಡರ‍್ಸ್ ಜು.10ರಂದು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಬಳಿಯಿರುವ ಪಿಂಟೋ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಜಪಾನ್‌ನಲ್ಲಿ ಪ್ರಾರಂಭಗೊಂಡಿರುವ ನಿಪ್ಪಾನ್ ಪೈಂಟ್ 143 ವರ್ಷಗಳ ಇತಿಹಾಸ ಹೊಂದಿದ್ದು ಏಷ್ಯಾದಲ್ಲಿಯೇ ನಂಬರ್ ವನ್ ಪೈಂಟ್ ಆಗಿದೆ. ಇದು ಉತ್ತಮ ಪರಿಸರ ಸ್ನೇಹಿಯಾಗಿದೆ. ಪರಿಸರವನ್ನು ರಕ್ಷಿಸುವ ಜೊತೆಗೆ ಜೀವನದ ಗುಣಮಟ್ಟವನ್ನು ಹೆಚ್ಚುಸುವ ಸುಧಾರಿತ ಉತ್ಪನ್ನಗಳನ್ನು ಸಮಾಜಕ್ಕೆ ಒದಗಿಸುವುದು, ನವೀನ ತಂತ್ರಜಾನದ ಮೂಲಕ ತನ್ನ ಗ್ರಾಹಕರಿಗೆ ಅಸಾಧಾರಣ ಉತ್ಪನ್ನಗಳನ್ನು ಒದಗಿಸುತ್ತಿದೆ. ಆಂತರಿಕ, ಬಾಹ್ಯ ಮತ್ತು ದಂತ ಕವಚದ ಪೂರ್ಣಗೊಳಿಸುವ ಶ್ರೇಣಿಯ ಹೊರತಾಗಿ ಅದರ ತಾಂತ್ರಿಕ ಪರಾಕ್ರಮವನ್ನು ಪ್ರದರ್ಶಿಸುವ ಅನೇಕ ವಿಶೇಷ ಉತ್ಪನ್ನಗಳನ್ನು ನಿಪ್ಪಾನ್ ಪೈಂಟ್ ಹೊಂದಿದೆ.
ನೂತನ ಮಳಿಗೆಯನ್ನು ಆದರ್ಶ ಆಸ್ಪತ್ರೆಯ ಡಾ. ಎಂ.ಕೆ ಪ್ರಸಾದ್ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಅರುಣ್ ಕುಮಾರ್ ಪುತ್ತಿಲ, ಸಂತ ಫಿಲೋಮಿನಾ ಸ್ನಾತಕೋತ್ತರ ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೇರೋ, ಮಾಯಿದೇ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ಲೋಹಿತ್ ಅಜಯ್ ಮಸ್ಕರೇನಸ್, ಕುಂಬ್ರ ಕೆಐಸಿಯ ಕಾರ್ಯದರ್ಶಿ ಎ.ಎಂ ಭಾವ ಹಾಜಿ, ಎಪಿಎಂಸಿ ರಸ್ತೆಯ ಸಲಾಫಿ ಮಸ್ಜಿದ್‌ನ ಅಧ್ಯಕ್ಷ ಯಾಹ್ಯಾ, ಆರ್ಥೋಪೆಡಿಕ್ ಸರ್ಜನ್ ಡಾ.ಭಾಸ್ಕರ್ ಎಂ., ಜೆ,ಕೆ ಕನ್‌ಸ್ಟ್ರಕ್ಷನ್‌ನ ಆಡಳಿತ ನಿರ್ದೇಶಕ ಜಯಕುಮಾರ್ ನಾಯರ್, ಕೆ.ಎಂ ಕನ್‌ಸ್ಟ್ರಕ್ಷನ್‌ನ ಆಡಳಿತ ನಿರ್ದೇಶಕ ಕೆ.ಎಂ ಹಂಝ, ನಿಪ್ಪಾನ್ ಪೈಂಟ್ಸ್‌ನ ಉಪ್ಪಿನಂಗಡಿಯ ವಿತರಕ ಗಜಾನನ ಟ್ರೇಡರ‍್ಸ್‌ನ ಸುರೇಶ್ ಕೆ., ನಿಪ್ಪಾನ್ ಪೈಂಟ್ಸ್‌ನ ಡಿವಿಜನಲ್ ಸೇಲ್ಸ್ ಮ್ಯಾನೇಜರ್ ಪ್ರಶಾಂತ್ ಕುಂದಾಪುರ, ನಿಪ್ಪಾನ್ ಪೈಂಟ್‌ನ ವ್ಯವಸ್ಥಾಪಕ ಗುಣಪಾಲ ಆಳ್ವವ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮ್ಹಾಲಕರು ತಿಳಿಸಿದ್ದಾರೆ.