ಪುತ್ತೂರು: ಪ್ರತಿನಿತ್ಯ ಮನೆಯಡುಗೆ ಮಾಡಿ ಬೇಸತ್ತ ಮಹಿಳೆಯರು ಒಂದೆಡೆಯಾದರೆ, ಇಂದು ಮಧ್ಯಾಹ್ನಕ್ಕೇನು? ರಾತ್ರಿಗೇನು ಮಾಡಲೀ ಎಂದು ಯೋಚಿಸುವ ಮಹಿಳೆಯರು ಇನ್ನೊಂದೆಡೆ. ಇನ್ನೂ ಅನಿರೀಕ್ಷಿತವಾಗಿ ಮನೆಗೆ ನೆಂಟರು ಬಂದರಂತೂ ಕೇಳುವುದೇ ಬೇಡ, ತರಾತುರಿಯಲ್ಲಿ ಅದೇನು ಮಾಡಬೇಕೆಂದು ತೋಚದೆ ಗೊಂದಲಕ್ಕೆ ಒಳಗಾಗುವರೇ ಜಾಸ್ತಿ. ಇಂತಹ ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ನೀಡುವ ಸುದ್ದಿಯೊಂದು ಹೊರಬಿದ್ದದೆ.
ಪುತ್ತೂರಿನಲ್ಲಿ ಮೊದಲ ಬಾರಿ “ಕರಿ ಶಾಪ್” ಜು.15ರಂದು ಆರಂಭಗೊಳ್ಳಲಿದ್ದು, ಮಹಿಳೆಯರ ಪ್ರತಿನಿತ್ಯದ “ಕರಿ ಮಾಡುವ ತಲೆನೋವಿಗೆ ಮುಕ್ತಿʼ ನೀಡಲಿದೆ. ದರ್ಬೆಯಲ್ಲಿರುವ ಮಹಾಲಿಂಗೇಶ್ವರ ಟವರ್ಸ್ ನಲ್ಲಿ “ವಿಜಯಾಸ್ ಕರಿ ಶಾಪ್” ನಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳು ದೊರಕಲಿದ್ದು, ನಿಮ್ಮ ಪ್ರತಿನಿತ್ಯದ ಮತ್ತು ವಿಶೇಷ ದಿನಗಳಿಗೆ ಬೇಕಾದ ಕರಿ ಖಾದ್ಯಗಳನ್ನು ಸೂಕ್ತ ಸಮಯದಲ್ಲಿ ಒದಗಿಸಲಿದೆ.