ಪುಡಾ ಡೆಡ್ ಆಗಿದೆ, ನಿಮ್ಮ ಕೆಲಸ ಸಾಕಾಗುವುದಿಲ್ಲ ಶಾಸಕರ ಕರೆ – ಬೇಸರಗೊಂಡ ಪುಡಾ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ರಾಜೀನಾಮೆ

0

ರಾಜೀನಾಮೆ ಪತ್ರ ಸರಕಾರಕ್ಕೆ ರಿಜಿಸ್ಟರ್ ಪೋಸ್ಟ್ ಮಾಡಿದ್ದೇನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

ಪುತ್ತೂರು: ಕಾಂಗ್ರೆಸ್ ಪಕ್ಷ ನನಗೆ ಹಲವಾರು ಹುದ್ದೆ ನೀಡಿದೆ, ಅದನ್ನು ನಿಭಾಯಿಸಿದ್ದೇನೆ.‌ ಇತ್ತೀಚೆಗೆ ಪುಡಾ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಶಾಸಕರೇ ನೇಮಕ ಮಾಡಿದ್ದರು. ಆದರೆ ಅವರೇ ಮೊನ್ನೆ ಬೆಂಗಳೂರಿನಿಂದ ಪುಡಾ ಡೆಡ್ ಆಗಿದೆ. ನಿಮ್ಮ ಕೆಲಸ ಸಾಕಾಗುವುದಿಲ್ಲ ಎಂದು ಕರೆ ಮಾಡಿ ತಿಳಿಸಿದ್ದಾರೆ. ಇದು ನನಗೆ ತುಂಬಾ ಬೇಸರಗೊಂಡು‌ ಮೂರು ದಿನ ಕಳೆದು ನಾನು ಸರಕಾರಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಭಾಸ್ಕರ್ ಕೋಡಿಂಬಾಳ ಅವರು ನಾನು ಸ್ವಲ್ಪ ಸ್ವಾಭಿಮಾನಿ. ಇವತ್ತು ನನ್ನನ್ನು ಯಾರು ನೇಮಕ ಮಾಡಿದ್ದಾರೋ ಅವರಿಗೆ ಅಸಮಾಧಾನ ಇದೆಯೋ ಗೊತ್ತಿಲ್ಲ. ಆದರೆ ನನಗಂತು ಬೇಸರ ಆಗಿದೆ. ನಾನು ಹುದ್ದೆ ಅಪೇಕ್ಷೆ ಮಾಡಿದವನಲ್ಲ. ಎಲ್ಲವೂ ತನ್ನಿಂದ ತಾನೆ ಬಂದದ್ದು ಎಂದವರು ಬೇಸರದಿಂದಲೇ ಮಾತನಾಡಿದರು. ರಾಜೀನಾಮೆ ಪತ್ರವನ್ನು ಸರಕಾರಕ್ಕೆ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿ ಕೊಟ್ಟಿರುವುದಾಗಿ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here