ಸವಣೂರು: ಮೊಗರು ಶಾಲೆಯಲ್ಲಿ ಪೋಕ್ಸೋ ಕಾಯಿದೆ ಅರಿವು ಕಾರ್ಯಾಗಾರ

0

ಸವಣೂರು: ಸವಣೂರು ಮೊಗರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಕ್ಸೋ ಕಾಯಿದೆ ಅರಿವು ಈ ಕಾರ್ಯಕ್ರಮ ನಡೆಯಿತು.

ಪೋಕ್ಸೋ ಕಾಯಿದೆ ಎಂದರೇನು? ಎಂಬುದನ್ನು ವಿಡಿಯೋ ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಜುಸ್ತಿನಾ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ರಫೀಕ್ ಎಂ. ಎ ಪೋಕ್ಸೋ ಕಾಯಿದೆ ಅರಿವು ಈ ಕಾರ್ಯಕ್ರಮದ ಕುರಿತಾದ ವಿಷಯದ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ತಮ್ಮ ಸ್ನೇಹಿತ ವರ್ಗಕ್ಕೆ, ಪೋಷಕರಿಗೂ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಾನಕಿ, ಗುಲ್ಶನ್, ಸವಿತಾ, ದಯಾಮಣಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here