ಮೈತ್ರಿ ಇಲೆಕ್ಟ್ರಿಕ್ ಕಂಪೆನಿ ವತಿಯಿಂದ ಇಲೆಕ್ಟ್ರೀಷಿಯನ್‌ಗಳಿಗೆ ಕಾರ್ಯಗಾರ

0

ಪುತ್ತೂರು: ಇಲೆಕ್ಟ್ರಾನಿಕ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ, ಹ್ಯಾವೆಲ್ಸ್ ಇಂಡಿಯಾ ಜಂಟಿಯಾಗಿ ಮೈತ್ರಿ ಇಲೆಕ್ಟ್ರಿಕ್ ಕಂಪೆನಿಯ ಸಹಭಾಗಿತ್ವದಲ್ಲಿ ಇಲೆಕ್ಟ್ರೀಷಿಯನ್‌ಗಳಿಗೆ ಕಾರ್ಯಗಾರ ‘ಮಹಾರಥ್’ ಬಪ್ಪಳಿಗೆ ರಸ್ತೆಯಲ್ಲಿರುವ ಜೈನಭವನದಲ್ಲಿ ಜು.14ರಂದು ನಡೆಯಿತು.

ಸಂಜೀವ ಗೌಡರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಇದು ಕೇಂದ್ರ ಸರಕಾರದ ಉತ್ತಮ ಯೋಜನೆಯಾಗಿದ್ದು ಕೌಶಲ್ಯದಿಂದ ಯಶಸ್ಸಿನ ವರೆಗೆ ಇಲೆಕ್ಟ್ರೀಷಿಯನ್‌ಗಳನ್ನು ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದರು. 300ಕ್ಕೂ ಮಿಕ್ಕಿ ಪುತ್ತೂರು ತಾಲೂಕು ಹಾಗೂ ಆಸುಪಾಸಿನ ಇಲೆಕ್ಟ್ರೀಷಿಯನ್‌ಗಳು ಕಾರ್ಯಗಾರದಲ್ಲಿ ಭಾಗಿಯಾಗಿದ್ದರು.


ಕೇಂದ್ರ ಸರಕಾರದ ಸಂಪನ್ಮೂಲ ವ್ಯಕ್ತಿಯಾಗಿ ಹೈದರಾಬಾದ್‌ನ ಶ್ಯಾಮ್‌ಪ್ರಸಾದ್ ಖಾಸರಿ ಇಲೆಕ್ಟ್ರೀಷಿಯನ್‌ಗಳಿಗೆ ತರಬೇತಿ ಮತ್ತು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಹ್ಯಾವೆಲ್ಸ್ ಕಂಪೆನಿಯ ಎಲ್ಲ ಉತ್ಪನ್ನಗಳು ಮತ್ತು ಹೊಸ ಉತ್ಪನ್ನಗಳ ಮಾಹಿತಿಯನ್ನು ಹ್ಯಾವೆಲ್ಸ್ ಕಂಪೆನಿಯ ಪ್ರತಿನಿಧಿಗಳು ನೀಡಿದರು. ಹ್ಯಾವೆಲ್ಸ್ ಕಂಪೆನಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸತ್ಯನಾರಾಯಣ, ಸೀನಿಯರ್ ಮ್ಯಾನೇಜರ್ ಚೈತನ್ಯ ಕುಮಾರ್, ರಾಜೇಶ್ ಎಂ.ಪಿ, ವಿಶಾಲ್ ನಾಯ್ಕ್, ಕಿರಣ್ ಎಸ್, ಆಕಿಬ್, ಚಂದನ್ ಪೈ, ಸುಬ್ರಹ್ಮಣ್ಯ ಭಟ್, ಮೈತ್ರಿ ಇಲೆಕ್ಟ್ರಿಕ್ ಕಂಪೆನಿಯ ಉರ್ಬನ್ ಉಪಸ್ಥಿತರಿದ್ದರು. ಸಂದೀಪ್ ಹೆಗ್ಡೆ ಸ್ವಾಗತಿಸಿ, ಡೆಪ್ಯೂಟಿ ಜನರಲ್ ಮ್ಯಾನೇಜರ್ ವಿವೇಕಾನಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೈತ್ರಿ ಇಲೆಕ್ಟ್ರಿಕ್ ಕಂಪೆನಿಯ ಮಾಲಕ ರವಿನಾರಾಯಣ ವಂದಿಸಿದರು.

ಯೋಜನೆಯ ವಿಶೇಷತೆ
ಇದರಲ್ಲಿ ಭಾಗವಹಿಸಿದ ಇಲೆಕ್ಟ್ರೀಷಿಯನ್‌ಗಳಿಗೆ ಸರಕಾರದಿಂದ ಪ್ರಮಾಣೀಕೃತ ಪ್ರಮಾಣಪತ್ರ ನೀಡಲಾಗುವುದು. ಇದಕ್ಕೆ ದೇಶಾದ್ಯಂತ ಮಾನ್ಯತೆ ಇದೆ. ಸುರಕ್ಷತೆ ಸಂಬಂಧಿತ ತಾಂತ್ರಿಕ ಸಲಹೆ, ಹೊಸ ಉತ್ಪನ್ನ ಮತ್ತು ತಾಂತ್ರಿಕ ತಿಳುವಳಿಕೆ. ಈ 3 ಪ್ರಯೋಜನಗಳನ್ನು ಇಲೆಕ್ಟ್ರೀಷಿಯನ್‌ಗಳು ಪಡೆದುಕೊಂಡರು.

LEAVE A REPLY

Please enter your comment!
Please enter your name here