ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳಿಂದ ಸಸ್ಯ- ಸಂಜೀವಿನಿ ಯೋಜನೆಗೆ ಚಾಲನೆ

0

ಪುತ್ತೂರು:ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಪ್ರವರ್ತಿತ ತೆಂಕಿಲ ವಿವೇಕ ನಗರ ಆವರಣದ ವಿದ್ಯಾಸಂಸ್ಥೆಗಳಾದ ವಿವೇಕಾನಂದ ಪ್ರಶಿಕ್ಷಣ ಮಹಾವಿದ್ಯಾಲಯ ,ನರೇಂದ್ರ ಪದವಿ ಪೂರ್ವ ಕಾಲೇಜು, ವಿವೇಕಾನಂದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲಾ ಸಹಯೋಗದೊಂದಿಗೆ ತೆಂಕಿಲ ಆವರಣದಲ್ಲಿ ಹಸಿರು – ಪರಿಸರ ಕಲ್ಪನಾಧಾರಿತ ಸಸ್ಯ – ಸಂಜೀವಿನಿ ಯೋಜನೆಗೆ ಗಿಡ ನೆಡುವುದರ ಮೂಲಕ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಇವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸತೀಶ್ ರಾವ್ ಪರಿಸರ ಉಳಿಸಿ, ಬೆಳೆಸಿ, ಕಾಪಾಡುವ ದೃಷ್ಟಿಯಿಂದ ವಿದ್ಯಾವರ್ಧಕ ಸಂಘದಿಂದ 2023 – 24 ರಲ್ಲಿ ವಿವೇಕ ಸಂಜೀವಿನಿ ಹಸಿರು ಪರಿಸರ ಯೋಜನೆ ಆರಂಭವಾಗಿತ್ತು. ಪ್ರಸ್ತುತ ವರುಷವು ನಮ್ಮ ಪರಿಸರ – ಹಸಿರು ಪರಿಸರ ಎಂಬ ಆಶಯದೊಂದಿಗೆ ಈ ಯೋಜನೆ ಮುಂದುವರೆಯಲಿದೆ. ಇದಕ್ಕಾಗಿ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ,ಶಿಕ್ಷಕ ವೃಂದ, ಪೋಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಜೋಡಿಕೊಂಡು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು .


ಈ ಸಂದರ್ಭ ತೆಂಕಿಲ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯವರು, ಮುಖ್ಯ ಗುರುಗಳು ,ಪ್ರಾಂಶುಪಾಲರು, ಪ್ರಾಧ್ಯಾಪಕ – ಶಿಕ್ಷಕ ವೃಂದದವರು ಹಾಗೂ ಪೂರಕ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು .ಯೋಜನೆಯ ಮುಂದುವರಿದ ಭಾಗವಾಗಿ ಆವರಣದಲ್ಲಿ ಹಲಸು , ದೀವಿ ಹಲಸು, ನಿಂಬೆ, ಪೇರಳೆ ,ನೇರಳೆ ,ಚೆರ್ರಿ ,ಸಪೋಟ, ಬೇವು ಮುಂತಾದ 40ಕ್ಕಿಂತಲೂ ಹೆಚ್ಚಿನ ಬಗೆಯ ಗಿಡಗಳನ್ನು ನೆಡಲಾಯಿತು .

LEAVE A REPLY

Please enter your comment!
Please enter your name here