ಶತಮಾನೋತ್ಸವ ಪೂರ್ವಭಾವಿ ಸಭೆ, ಮತ್ತು ತಿಂಗಳ ಕಾರ್ಯಕ್ರಮಕ್ಕೆ ಚಾಲನೆ

0

ಬಡಗನ್ನೂರುಃ ದ.ಕ.ಜಿ.ಪಂ ಉ .ಹಿ.ಪ್ರಾಥಮಿಕ ಶಾಲೆ ಬಡಗನ್ನೂರು ಇದರ ಶತಮಾನೋತ್ಸವ ಸಂಭ್ರಮ ಅಂಗವಾಗಿ ತಿಂಗಳ ಕಾರ್ಯಕ್ರಮವನ್ನು ಸ್ವಚ್ಚತಾ ಅಭಿಯಾನ ಮೂಲಕ ಚಾಲನೆ ನೀಡಲಾಯಿತು.

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಹಾಗೂ ಶತಮಾನೋತ್ಸವ ಸಮಿತಿ ಗೌರವ ಸಲಹೆಗಾರರು ಆದ ಶ್ರೀನಿವಾಸ್ ಭಟ್ ಸಿ.ಹೆಚ್  ತಿಂಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿ ಜನರಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಪ್ರಥಮ ತಿಂಗಳ ಕಾರ್ಯಕ್ರಮವಾಗಿ ಹಮ್ಮಿಕೊಂಡು ಶಾಲಾ ವಠಾರದಿಂದ ಗ್ರಾ.ಪಂ ವರೆಗೆ  ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ಹೆಕ್ಕುವ ಮೂಲಕ ಇಡೀ ಪೇಟೆಯನ್ನು ಸ್ವಚ್ಛಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಶಾಲಾ ಶತಮಾನೋತ್ಸವ ಸಂಭ್ರಮ ಆಚರಣೆ ಸಂದರ್ಭದಲ್ಲಿ ಶಾಲೆಗೆ ಎರಡು ಕೊಠಡಿ ಅವಶ್ಯಕತೆ ಇದ್ದು, ಸರಕಾರದ ಅನುದಾನ ಹೊಂದಿಸುವಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಮಾತನಾಡಿ  ಶತಮಾನೋತ್ಸವ ಅಂಗವಾಗಿ ತಿಂಗಳ ಪ್ರಥಮ ಕಾರ್ಯಕ್ರಮವಾಗಿ ಸ್ವಚ್ಚತಾ ಅಭಿಯಾನದ ಮೂಲಕ ಶಾಲೆಯಿಂದ ಪಂಚಾಯತ್ ವರೆಗೆ ಸ್ವಚ್ಛತೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅನೇಕ ವಿವಿಧ ರೀತಿಯ ಕಾರ್ಯಕ್ರಮ ಆಯೋಜಿಸುವ  ಮುಖಾಂತರ ಶತಮಾನೋತ್ಸವ ಸಂಭ್ರಮ ಆಚರಣೆ ನಮ್ಮ ಯೋಜನೆ,ಯೋಚನೆಗಳು ಯಶಸ್ವಿಯಾಗಿ ನಡೆಯಲಿ ಎಂದ ಅವರು, ನಾವು ಕಲಿತ ಒಂದು ಸಂಸ್ಥೆ ಅದನ್ನು ನಮ್ಮ ಮುಂದಿನ ಪೀಳಿಗೆ ನೆನಪಿನಲ್ಲಿ ಇಟ್ಟುಕೊಳ್ಳುವ ಕೆಲಸ  ನಮ್ಮೆಲ್ಲರಿಂದ ಆಗಬೇಕು, ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರಬೇಕು ಎಂದರು.

ಶತಮಾನೋತ್ಸವ ಸಮಿತಿ ಸಂಚಾಲಕ ಸತೀಶ್ ರೈ ಕಟ್ಟಾವು ಮಾತನಾಡಿ ಸ್ವಚ್ಚ ಗ್ರಾಮದ ಮುಖಾಂತರ ಸ್ವಚ್ಛ ಮುಕ್ತ ಭಾರತ ಮಾಡುವಲ್ಲಿ ತಾವೆಲ್ಲರೂ ಶ್ರಮಿಸುವಂತೆ ಹೇಳಿ ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ  ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೈ ಕುದ್ಕಾಡಿ, ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು ಕಾರ್ಯದರ್ಶಿ ಶಾಂಭವಿ ರೈ ಕುದ್ಕಾಡಿ, ಕೋಶಾಧಿಕಾರಿ ಸುಬ್ರಾಯ ನಾಯಕ್ ಮೇಗಿನಮನೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಮಾಜಿ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಪಡುಮಲೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪಾಟಾಳಿ ಪಟ್ಟೆ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಶಂಕರಿ ಪಟ್ಟೆ, ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಶ್ರೀಧರ್ ಭಟ್ ಸಿ.ಹೆಚ್, ಸದಸ್ಯರುಗಳಾದ ಉದಯ ಕುಮಾರ್ ಪಡುಮಲೆ, ಮಹಾಬ ರೈ ಮೇಗಿನಮನೆ ಅಬ್ದುಲ್ ರಹಿಮಾನ್ ಮೈಂದನಡ್ಕ, ಭಾರತಿ ರೈ ಕುದ್ಕಾಡಿ, ಪ್ರೇಮಾ ಮೈಂದನಡ್ಕ, ಲತಾ ಕಟ್ಟಾವು, ಸುಲೋಚನ ನೇರ್ಲಂಪಾಡಿ,  ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳ ಪೋಷಕರು ಮತ್ತು ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ ಸ್ವಾಗತಿಸಿದರು. ಸಹ ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿ, ರಮ್ಯ ಕಾರ್ಯಕ್ರಮ ನಿರೂಪಿಸಿದರು.

ಜು.27 ರಂದು ಅಟಿಕೂಟ
ಬಡಗನ್ನೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿತು ವಿವಿಧ ಭಾಗದಲ್ಲಿ ಉದ್ಯೋಗದಲ್ಲಿದ್ದು, ಈ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರನ್ನು, ಶಿಕ್ಷಣಾಭಿಮಾನಿಗಳನ್ನು ಹಾಗೂ ಊರಿನವರನ್ನು ಶತಮಾನೋತ್ಸವ ಕಾರ್ಯಕ್ರಮದಲ್ಲಿ ಒಟ್ಟು ಸೇರಿಸುವ ಒಂದು ವಿನೂತನ ಕಾರ್ಯಕ್ರಮ ಆಟಿಕೂಟ ಇದಾಗಿದೆ. ಕಾರ್ಯಕ್ರಮದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಒಳಾಂಗಣ ಹಾಗೂ ಹೋರಾಂಗಣ ಆಟೋಟ ಸ್ಪರ್ಧೆ ಅಯೋಜಿಸಲಾಗಿದೆ.

LEAVE A REPLY

Please enter your comment!
Please enter your name here