





ನೆಲ್ಯಾಡಿ: ಕಾರು ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ನ.22ರಂದು ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಜಂಕ್ಷನ್ನಲ್ಲಿ ನಡೆದಿದೆ.


ಸ್ಕೂಟರ್ ಸವಾರರಾದ ಶ್ರೀನಿವಾಸ, ಸಹಸವಾರೆ ಶಾರದಾ ಗಾಯಗೊಂಡವರಾಗಿದ್ದಾರೆ. ಉಡುಪಿ ನಿವಾಸಿ ಪ್ರೀತನ್ ಬಂಗೇರ ಎಂಬವರು ಹಾಸನದಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು (ಕೆಎ20, ಝೆಡ್ 5560) ಹಾಗೂ ಶ್ರೀನಿವಾಸ ಎಂಬವರು ಸವಾರರಾಗಿ, ಶಾರದ ಎಂಬವರು ಸಹಸವಾರೆಯಾಗಿ ಪ್ರಯಾಣಿಸುತ್ತಿದ್ದ ಸ್ಕೂಟರ್ (ಕೆಎ 21, ವೈ 8012) ನಡುವೆ ಗೋಳಿತ್ತೊಟ್ಟು ಜಂಕ್ಷನ್ನಲ್ಲಿ ಅಪಘಾತ ಸಂಭವಿಸಿದೆ. ಸ್ಕೂಟರ್ ಸವಾರ ರಸ್ತೆಯ ಬಲಬದಿಯಿಂದ ಒಮ್ಮೆಲೇ ಎಡಬದಿಗೆ ಸವಾರಿ ಮಾಡಿದುದ್ದರಿಂದ ಸ್ಕೂಟರ್ ಕಾರಿನ ಬಲ ಭಾಗದ ಮುಂಭಾಗಕ್ಕೆ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳು ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಾರು ಚಾಲಕ ಪ್ರೀತನ್ ಬಂಗೇರ ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.















