ಪುತ್ತೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಇದರ 117ನೇ ಸಂಸ್ಥಾಪನಾ ದಿನವನ್ನು ಜು.20ರಂದು ಪುತ್ತೂರು ಕೆ.ಪಿ.ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್ ಕಚೇರಿಯಲ್ಲಿ ಆಚರಿಸಲಾಯಿತು.
ಬ್ಯಾಂಕ್‌ನ ಹಿರಿಯ ಶಾಖಾ ಪ್ರಬಂಧಕ ಬಾಲು ಬಿ.ಆರ್ ಅವರು ಬರೋಡಾದ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ ಅವರ ಭಾವ ಚಿತ್ರದ ಮುಂದೆ ದೀಪ ಪ್ರಜ್ವಲಿಸಿ ಪುಷ್ಪಾರ್ಚಣೆ ಮಾಡುವ ಪ್ರಾಸ್ತಾವಿಕವಾಗಿ ಬ್ಯಾಂಕ್ ಬೆಳೆದು ಬಂದ ಮತ್ತು ಸೇವೆಗಳ ಕುರಿತ ಮಾಹಿತಿಯನ್ನು ಗ್ರಾಹಕರ ಮುಂದಿಟ್ಟರು.
ಈ ಸಂದರ್ಭ ಡಾ. ಬದರಿನಾಥ್, ಡಾ. ಗಣೇಶ್, ಪಿಡಬ್ಲ್ಯುಡಿ ಗುತ್ತಿಗೆದಾರ ಹರೀಶ್, ಉದ್ಯಮಿ ಸತೀಶ್, ನ್ಯಾಯವಾದಿ ಫಝ್ಲುಲ್ ರಹೀಮ್, ಪಾದುಕಾ ಪೂಟ್‌ವೇರ್‌ನ ಜಯರಾಜ್, ಶಿವ ಫ್ಲವರ‍್ಸ್‌ನ ಮೋನಪ್ಪ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ವಿಜಯ ಹೆಚ್ ಆಳ್ವ, ಉದ್ಯಮಿ ಸೂರಜ್ ನಾಯರ್, ಅನಿಲ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪ್ರವೀನ್ ಸ್ವಾಗತಿಸಿದರು. ಬ್ಯಾಂಕ್‌ನ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.