ಪುತ್ತೂರು: ನುಳಿಯಾಲು ದಿ| ಸೋಮಪ್ಪ ರೈ ಯವರ ಪತ್ನಿ ಮೊಡಪ್ಪಾಡಿಗುತ್ತು ನಾಯಿಲ ಸರ್ವಾಣಿ ರೈ (88 ವರ್ಷ) ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ವಾಣಿ , ವನಜ , ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸತ್ಯನಾರಾಯಣ ರೈ ನುಳಿಯಾಲು , ಒಳಮೊಗ್ರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪುರಂದರ ರೈ ನಾಯಿಲ , ದೋಳ್ಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ರತ್ನಾವತಿ , ಅಳಿಯಂದಿರು , ಸೊಸೆಯಂದಿರು , ಮೊಮ್ಮಕ್ಕಳು , ಮರಿಮಕ್ಕಳು ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಮನೆಗೆ ಬಿಜೆಪಿ ಎಸ್.ಟಿ ಮೋರ್ಛ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ , ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರ ಸಂಚಾಲಕ ರಾಜೇಶ್ ರೈ ಪರ್ಪುಂಜ , ರಮೇಶ್ ರೈ ಡಿಂಬ್ರಿ , ಆರ್ಯಾಪು ಪಂಚಾಯತ್ ಸದಸ್ಯ ಶ್ರೀನಿವಾಸ ರೈ ಒಳತ್ತಡ್ಕ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.