ಪುತ್ತೂರು: ದರ್ಬೆ ಮೊದೀನ್ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಶ್ರೀನಿಧಿ ಆಗ್ರೋ ಸರ್ವಿಸಸ್‌ನಲ್ಲಿ ಪೆಲಿಕಾನ್ ಪೆಟ್ರೋಲ್ ಜನರೇಟರ್‌ನ ಮಾರಾಟ ಮತ್ತು ಸರ್ವಿಸ್ ಜು.೨೨ರಂದು ಆರಂಭಗೊಂಡಿತು.
ವೇದಮೂರ್ತಿ ಸಂಸ್ಕೃತ ಶಿರೋಮಣಿ ಮಂಜುಳಗಿರಿ ವೆಂಕಟರಮಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಅರ್ಚಕ ವೇದಮೂರ್ತಿ ಬಡಜ ಜಯರಾಮ ಜೋಯಿಷ, ಆರ್‌ಎಸ್ ಪವರ್ ಕಂಟ್ರೋಲ್ ಪ್ರೈ.ಲಿ.ನ ಈಶ್ವರಭಟ್ ಕಂಬಳಿಮೂಲೆ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪದ್ಮಶ್ರೀ ಸೋಲಾರ್‌ನ ಸೀತಾರಾಮ ರೈ, ಶೆಡ್ಡೆ ಪೆಟ್ರೋಲ್ ಪಂಪ್‌ನ ಅರುಣ್ ಶೆಡ್ಡೆ, ಸಂಜೀವಿನಿ ಪೆಟ್ರೋಲ್ ಪಂಪ್‌ನ ದೇರ್ಕಜೆ ವೆಂಕಟ್ರಮಣ ಭಟ್, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಜಿಗುಡ್ಡೆ ಈಶ್ವರ ಭಟ್, ಕಿಶಾನ್ ಆಗ್ರೋ ವರ್ಲ್ಡ್‌ನ ಗೋಪಾಲಕೃಷ್ಣ ಭಟ್, ಅಭಿಷೇಕ್, ನವನೀತ್, ಕೆ.ಎನ್.ಭಟ್ ಮುಕ್ರಂಪಾಡಿ, ಈಶ್ವರ ಭಟ್ ಪೆರುವೋಡಿ, ವೆಂಕಟರಮಣ ಭಟ್ ಮರಕ್ಕೂರು, ನರಸಿಂಹಪ್ರಸಾದ್ ಕಂಬಳಿಮೂಲೆ, ನಾಗರಾಜ ಭಟ್ ಮುಂಡೋಡಿ, ಪೆಲಿಕಾನ್ ಕಂಪೆನಿಯ ಏರಿಯಾ ಮ್ಯಾನೇಜರ್ ಸಂತೋಷ್ ಎಸ್. ನಾಯರ್, ಚೇತನ್ ಕುಮಾರ್, ಸಿಬಂದಿಗಳಾದ ಹರ್ಷಿತ್, ರಾಜೇಶ್, ಮಾಲಕರ ತಾಯಿ ಮೀನಾಕ್ಷಿ ಅಮ್ಮ ಉಪಸ್ಥಿತರಿದ್ದರು. ಶ್ರೀನಿಧಿ ಆಗ್ರೋ ಸರ್ವಿಸಸ್ ಮಾಲಕ ಗೋಪಾಲಕೃಷ್ಣ ಪಿ. ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ಪೆಲಿಕಾನ್ ಪೆಟ್ರೋಲ್‌ನ 1ಕೆವಿ ಯಿಂದ 9 ಕೆವಿ ರವರೆಗಿನ ಜನರೇಟರ್‌ಗಳ ಮಾರಾಟ, ಸರ್ವಿಸ್, ಬಿಡಿಭಾಗಗಳು, ಸೈಲೆಂಟ್ ಮಾಡೆಲ್ ಜನರೇಟರ್‌ಗಳು ಲಭ್ಯವಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.