ಕೆಯ್ಯೂರು : ಕೆಯ್ಯೂರು ಗ್ರಾಮದ ಮಾಡಾವು ಶಾಲಾಬಳಿ ನಿವಾಸಿ ನಾರಾಯಣ ನಾಯ್ಕ ಅಸೌಖ್ಯದಿಂದ ಮಂಗಳೂರು ಸರಕಾರಿ ಆಸ್ಪತ್ರೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜು 27ರಂದು ನಿಧನರಾದರು. ಮೃತರ ಪತ್ನಿ ಕಳೆದ ಮೂರು ತಿಂಗಳ ಹಿಂದೆ ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದರು.
ಮೃತರು ಪುತ್ರರಾದ ಚರಣ್, ಅಕ್ಷತ್, ಪುತ್ರಿ ಗೀತಾ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು.