ಭಾರೀ ಮಳೆಯ ಹಿನ್ನೆಲೆ: ಶಾಸಕರ ಬೆಂಗಳೂರು ಕಾರ್ಯಕ್ರಮ ರದ್ದು – ಕರಾವಳಿ ಸಂದರ್ಶನಕ್ಕೆ ಸಿಎಂ ಗೆ ಮನವಿ

0

ಪುತ್ತೂರು: ಪುತ್ತೂರು ಸೇರಿದಂತೆ ದ ಕ ಜಿಲ್ಲೆಯಲ್ಲಿ‌ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಕೆಲವೊಂದು ಅನಾಹುತಗಳು ಸಂಭವಿಸುತ್ತಿದ್ದು ಕ್ಷೇತ್ರದ ಭೇಟಿ ಹಾಗೂ ತುರ್ತು ವ್ಯವಸ್ಥೆ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ಶಾಸಕ ಅಶೋಕ್ ರೈ ಅವರು ಇಂದು ಪುತ್ತೂರಿನಲ್ಲಿ ವಿವಿಧ ಕಡೆಗಳಿಗೆ ಭೇಟಿ ನೀಡಲಿದ್ದಾರೆ.
ಇಂದು ಬೆಂಗಳೂರಿನಲ್ಲಿ ವಿವಿಧ ಸಚಿವರ ಭೇಟಿ ಹಾಗೂ ಕಂಬಳ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಎಲ್ಲಾ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಂದು ಪುತ್ತೂರಿಗೆ ಬರಲಿದ್ದು ಮಳೆಯ ಕಾರಣಕ್ಕೆ ಅನೇಕ ಕಡೆಗಳಲ್ಲಿ ಧರೆ ಕುಸಿತ, ಮನೆಗಳಿಗೆ ಹಾಗೂ ಕೃಷಿಗಳಿಗೆ ಹಾನಿಯಾಗಿದ್ದು ಹಿಂದೆಂದೂ ಕಂಡರಿಯದ ರೀತಿಯಲ್ಲಿ‌ ಮಳೆಗೆ ಅನಾಹುತಗಳು ಸಂಭವಿಸಿದೆ. ದಿನದ 24 ಗಂಟೆ ಅಲರ್ಟ್ ಆಗಿರುವಂತೆ ಶಾಸಕರು ಎರಡು ದಿನಗಳ ಹಿಂದೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಪ್ರಕೃತಿ ವಿಕೋಪದಿಂದ ಯಾವುದೇ ಜೀವ ಹಾನಿ ಸಂಭವಿಸದಿದ್ದರೂ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಇಂದು ಶಾಸಕರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

10 ಕೋಟಿ ರೂ ಪರಿಹಾರಕ್ಕೆ ಸಿ ಎಂ ಮನವಿ
ಮಳೆಯಿಂದ ತತ್ತರಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ರೂ ಪರಿಹಾರವನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಅಶೋಕ್ ರೈ ಮನವಿ ಸಲ್ಲಿಸಿದ್ದಾರೆ. ಮನೆ ಕುಸಿತ, ಧರೆ ಕುಸಿತದಿಂದ ಮನೆ ಹಾನಿಗೊಳಗಾದವರಿಗೆ ಪರಿಹಾರ ನೀಡುವಲ್ಲಿ ಸರಕಾರ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ‌ ಮಾಡಿದ್ದಾರೆ.

ಮುಂದಿನ ವಾರ ಸಿಎಂ ಪುತ್ತೂರು ಭೇಟಿ
ಪೃಕೃತ್ತಿ ವಿಕೋಪದಿಂದ ಆಗಿರುವ ಅನಾಹುತವನ್ನು ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.6 ಅಥವಾ 7ರಂದು ಭೇಟಿ ನೀಡಲಿದ್ದಾರೆ. ಪುತ್ತೂರಿಗೆ ಭೇಟಿ ನೀಡುವಂತೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದು ಇದಕ್ಕೆ ಸಿ ಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here