ಪುತ್ತೂರು:ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿಬರುವ ಅರಿಯಡ್ಕ ಗ್ರಾಮದ ಶೇಖಮಲೆ -ಮಡ್ಯಂಗಳ ಎಂಬಲ್ಲಿ ಇತ್ತೀಚೆಗೆ ಸುರಿದ ಕುಂಭದ್ರೋಣ ಮಳೆಗೆ ಸಂಭವಿಸಿದ ಭೂಕುಸಿತದ ಸ್ಥಳದಲ್ಲಿ ತಾತ್ಕಾಲಿಕ ಮಣ್ಣು ತೆರವು ಕಾರ್ಯಾಚರಣೆ ನಡೆದು ವಾಹನ ಸಂಚಾರ ಸುಗಮಗೊಳಿಸಲಾಗಿದೆ.
ಶೇಖಮಲೆ -ಮಡ್ಯಂಗಳ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಗುಡ್ಡವಿದೆ, ಅದಲ್ಲದೆ, ರಸ್ತೆಯ ಇನ್ನೊಂದು ಬದಿಯಲ್ಲಿ ಸಾಲುದ್ದಕ್ಕೂ ಅಡಿಕೆ ತೋಟವಿದೆ.ಮೆಸ್ಕಾಂ ಇಲಾಖೆಯ ಎಲ್.ಟಿ ಮತ್ತು ಎಚ್.ಟಿ.ಲೇನ್ ಗಳು ರಸ್ತೆ ಯ ಪಕ್ಕದಲ್ಲಿ ಹಾದು ಹೋಗಿವೆ.ಗುಡ್ಡದ ಮೇಲೆ ದೊಡ್ಡ ದೊಡ್ಡ ಮರಗಳಿವೆ.ಗುಡ್ಡದ ಮೇಲೆ ಸಮತಟ್ಟು ಪ್ರದೇಶದಲ್ಲಿ ನಾಲ್ಕೈದು ಕುಟುಂಬಗಳು ಅನೇಕ ವರ್ಷಗಳಿಂದ ವಾಸವಾಗಿದ್ದಾರೆ.ರಸ್ತೆಯ ಬದಿಯಿಂದ ಅವರವರ ಮನೆಗೆ ಸಂಪರ್ಕದ ರಸ್ತೆ ಮಾಡಿರುತ್ತಾರೆ.ಇಷ್ಟು ಸಮಯ ಯಾವುದೇ ಆತಂಕ ಇಲ್ಲದೆ ಸುಖ ಸಂಸಾರ ಮಾಡಿ ಕೊಂಡು ಬಂದಿರುವ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.ಸದ್ಯ ಮಳೆ ಕಡಿಮೆಯಾಗಿ ಮಣ್ಣು ಕುಸಿತ ನಿಂತರೂ , ಈಗೀನ ಸನ್ನಿವೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಮತ್ತಷ್ಟು ಗುಡ್ಡ ಕುಸಿತಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.ಇನ್ನಷ್ಟುಮಳೆ ಬಂದರೆ ಅಪಾಯ ತಪ್ಪಿದಲ್ಲ .
ಶೇಖಮಲೆ -ಮಡ್ಯಂಗಳ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಗುಡ್ಡದ ಬದಿಯಲ್ಲಿ ಅನೇಕ ವರ್ಷಗಳಿಂದ ನಾಲ್ಕೈದು ಕುಟುಂಬಗಳು ವಾಸವಾಗಿದ್ದಾರೆ.ಅವರಿಗೆ ಇಷ್ಟರ ತನಕ ಯಾವುದೇ ಸಮಸ್ಯೆಗಳು ಇರಲಿಲ್ಲ.ಆದರೆ ಪ್ರಕೃತಿಯ ವಿಕೋಪದ ಈ ಸಂದರ್ಭದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ.ಲೋಕೋಪಯೋಗಿ ಇಲಾಖೆ ತಡೆಗೋಡೆ ನಿರ್ಮಿಸಿ ಮುಂದಕ್ಕೆ ಆಗುವ ಅಪಾಯವನ್ನು ತಪ್ಪಿಸಬಹುದಾಗಿದೆ.
ಹರೀಶ್ ರೈ ಜಾರುತ್ತಾರು
ಸದಸ್ಯರು ಗ್ರಾಮ ಪಂಚಾಯತ್ ಅರಿಯಡ್ಕ