ಉಪ್ಪಿನಂಗಡಿ: ಗುಡ್ಡ ಕುಸಿದು ಮಣ್ಣಿನಿಂದ ಮುಚ್ಚಿ ಹೋಗಿದ್ದ ತೋಡಿನ ಮಣ್ಣನ್ನು ಸ್ಥಳೀಯರೇ ಶ್ರಮದಾನ ಮೂಲಕ ತೆಗೆದಿದ್ದಾರೆ.
ಹಿರೇಬಂಡಾಡಿ ಗ್ರಾಮದ ಪಟಾರ್ತಿ ಎಂಬಲ್ಲಿ ತೋಡಿನ ಬದಿಯ ಗುಡ್ಡ ಕುಸಿದು ತೋಡು ಮಣ್ಣಿನಿಂದ ಮುಚ್ಚಿ ಹೋಗಿತ್ತು. ಇದರಿಂದ ಕೆಲವರ ಕೃಷಿ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿತ್ತು.
ಅಲ್ಲದೇ, ಇನ್ನಷ್ಟು ಕೃಷಿಕರ ತೋಟಕ್ಕೆ ನೀರು ಆವರಿಸುವ ಭೀತಿಯಿತ್ತು. ಆದ್ದರಿಂದ ಪರಿಸರ ನಿವಾಸಿಗಳೆಲ್ಲಾ ಸೇರಿಕೊಂಡು ಶ್ರಮದಾನದ ಮೂಲಕ ತೋಡಿನ ಮಣ್ಣನ್ನು ತೆರವುಗೊಳಿಸುವ ಮೂಲಕ ತೋಡಿನಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ಹಮ್ಮಬ್ಬ ಶೌಕತ್ ಅಲಿ ಮಳೆ ಬಿಟ್ಟ ತಕ್ಷಣ ಇದಕ್ಕೆ ಗ್ರಾ.ಪಂ. ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದ್ದಾರೆ.