ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ 40ನೇ ತಾಳಮದ್ದಳೆಯಾಗಿ ಚಿತ್ರಸೇನ ಕಾಳಗ ಸುರತ್ಕಲ್ ಕೃಷ್ಣಾಪುರದ ಪದುಮಶ್ರೀ ನಿವಾಸದಲ್ಲಿ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್ ಉಪ್ಪಿನಂಗಡಿ, ನಿತೀಶ್ ಕುಮಾರ್ ವೈ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಶ್ರೀ ಗಣೇಶ ಭಟ್ ಸುರತ್ಕಲ್,ಶ್ರೀಯತಿ ಪುನರೂರು,ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ( ದೇವೇಂದ್ರ ಮತ್ತು ದ್ರೌಪದಿ)ಗೋಪಾಲ ಶೆಟ್ಟಿ ಕಳೆಂಜ,( ಚಿತ್ರಸೇನ )ದಿವಾಕರ ಆಚಾರ್ಯ ಗೇರುಕಟ್ಟೆ,( ಅರ್ಜುನ ) ಶ್ರೀಧರ ಎಸ್ಪಿ ಸುರತ್ಕಲ್( ಕೌರವ),ಹರೀಶ ಆಚಾರ್ಯ ಬಾರ್ಯ(ಕರ್ಣ ) ಶಂಕರನಾರಾಯಣ ಮಯ್ಯರ್ಪಾಡಿ,(ಭೀಮ ) ದೇವದಾಸ ಎಸ್.ಪಿಸುರತ್ಕಲ್ ( ಧರ್ಮರಾಯ ) ,ಶ್ರೀಮತಿ ಶ್ರುತಿ ವಿಸ್ಮಿತ್ ಉಪ್ಪಿನಂಗಡಿ ( ಭಾನುಮತಿ ಮತ್ತು ಸುರಭಟರು)ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪಾತಾಳ ಅಂಬಾ ಪ್ರಸಾದ್ ಮತ್ತು ಪ್ರಾಯೋಜಕರಾದ ಕಲಾವಿದ ಶ್ರೀಧರ ಎಸ್ ಪಿ ಸುರತ್ಕಲ್ ಇವರನ್ನು ಗೌರವಿಸಲಾಯಿತು.