ಆ. 11: ಬೆಟ್ಟಂಪಾಡಿ ಪ್ರಿಯದರ್ಶಿನಿಯಲ್ಲಿ ಉಚಿತ ಆಯುರ್ವೇದ ಮೆಡಿಕಲ್ ಕ್ಯಾಂಪ್

0

ಬೆಟ್ಟಂಪಾಡಿ: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬೆಟ್ಟಂಪಾಡಿ, ನಿಡ್ಪಳ್ಳಿ ಗ್ರಾಮ ವಿಕಾಸ ಯೋಜನೆಯ ಪರಿಕಲ್ಪನೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಕಾಟುಕುಕ್ಕೆ ಇದರ ಸಹಯೋಗದೊಂದಿಗೆ ಉಚಿತ ಆಯುರ್ವೇದ ಮೆಡಿಕಲ್ ಕ್ಯಾಂಪ್ ಆ. 11 ರಂದು ಅಪರಾಹ್ನ 2.30 ಗಂಟೆಯಿಂದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.


ಬಾಯಾರುಪದವು ಪ್ರಶಾಂತಿ ಕ್ಲಿನಿಕ್ ನ ವೈದ್ಯರಾದ ಡಾ. ಸತ್ಯನಾರಾಯಣ ಬಿ. ಹಾಗೂ ಪೆರ್ಲ ಚಿನ್ಮಯ ಕ್ಲಿನಿಕ್ ನ ವೈದ್ಯರಾದ ಡಾ. ಕೃಷ್ಣಮೋಹನ ಬಿ.ಆರ್. ತಜ್ಞ ವೈದ್ಯರುಗಳಾಗಿ ಭಾಗವಹಿಸಲಿದ್ದಾರೆ.


ಶಿಬಿರದಲ್ಲಿ ಎಲ್ಲಾ ರೀತಿಯ ರೋಗಗಳ ತಪಾಸಣೆ ಮತ್ತು ಔಷಧ ಉಚಿತವಾಗಿ ವಿತರಿಸಲಾಗುತ್ತದೆ. ಅದೇ ದಿನ 2 ಗಂಟೆಯಿಂದ ಶಿಬಿರದ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here