ಸವಣೂರು: ವಿದ್ಯಾರಶ್ಮಿಯಲ್ಲಿ ಪೋಷಕರ ಸಭೆ

0

ಸವಣೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ2024-25ನೇ ಸಾಲಿನ ಪೋಷಕರ ಸಭೆಯು ಸಂಸ್ಥೆಯ ಸಂಚಾಲಕ ಸಹಕಾರ ರತ್ನ ಸವಣೂರು ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಎಲ್ಲರೂ ಜೊತೆಯಾಗಿ ಸೇರಿದಾಗ ಮಾತ್ರವೇ ಒಂದು ಶಿಕ್ಷಣ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು. ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರು ಶೈಕ್ಷಣಿಕ ಮಹತ್ವಗಳ ಕುರಿತು ಮಾತನಾಡಿದರು.


ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಪಿಯುಸಿ ವಿಭಾಗದಿಂದ ರಾಮಪ್ರಸಾದ್ ರೈ ಕಲಾಯಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಉಳಿದಂತೆ ಬಶೀರ್ ಯು.ಪಿ. (ಪಿಯುಸಿ ವಿಭಾಗ), ಶ್ವೇತಾ (ಪ್ರೌಢಶಾಲಾ ವಿಭಾಗ), ಜೈನುದ್ದೀನ್ ತೋಟದಮೂಲೆ (ಪ್ರಾಥಮಿಕ ಶಾಲಾ ವಿಭಾಗ) ಮತ್ತು ಆಯಿಷಾ (ಕೆ.ಜಿ. ವಿಭಾಗ) ಇವರು ನಿರ್ದೇಶಕರಾಗಿ ಆಯ್ಕೆಯಾದರು.

ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ಶಾಲಾ ವಿಭಾಗದ ಪ್ರಾಂಶುಪಾಲೆ ಶಶಿಕಲಾ ಆಳ್ವ ಅವರು ಪೋಷಕರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಕನ್ನಡ ಶಿಕ್ಷಕಿ ಚೇತನಾ ಧನಂಜಯ್ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಕು.ರಶ್ಮಿತಾ ಮತ್ತು ಬಳಗದವರು ಸಂಸ್ಕೃತ ಶ್ಲೋಕ ಪಠನ ಮತ್ತು ಎಂ. ವೈಷ್ಣವಿ ಭಾರತೀಯ ಸಂವಿಧಾನದ ಪೀಠಿಕೆಯ ವಾಚನದಲ್ಲಿ ಸಹಕರಿಸಿದರು. ಶಿಕ್ಷಕಿ ಶೀಲಾವತಿ ಸ್ವಾಗತಿಸಿ ಪ್ರಾಂಶುಪಾಲ ಸೀತಾರಾಮ ಕೇವಳ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here