ಅಕ್ಷಯ ಕಾಲೇಜಿನಲ್ಲಿ ಐಒಟಿ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಡಿಜಿಟಲ್ ತಂತ್ರಜ್ಞಾನದ ಕುರಿತು ಕಾರ್ಯಾಗಾರ

0

ಪುತ್ತೂರು:ಅಕ್ಷಯಾ ಕಾಲೇಜು, ಪುತ್ತೂರು, ಬಿ.ಸಿ.ಎ. ವಿಭಾಗ, ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಪ್ರಥಮ ಬಿ.ಸಿ.ಎ. ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ಆ.8ರಂದು ನಡೆಯಿತು.

ಈ ಕಾರ್ಯಾಗಾರದಲ್ಲಿ, ಸಂಪನ್ಮೂಲ ವ್ಯಕ್ತಿಯಾಗಿ ಅಕ್ಷಯ ಕಾಲೇಜ್ ಪುತ್ತೂರು ಗಣಕ ವಿಭಾಗ ಉಪನ್ಯಾಸಕಿ ನಿಧಿಶ್ರೀ ಎಂ ಪಿ ಅವರಿಂದ ಸ್ಮಾರ್ಟ್ ಡಿವೈಸುಗಳು, ಡಿಜಿಟಲ್ ತಂತ್ರಜ್ಞಾನಗಳ ಮಹತ್ವ ಮತ್ತು ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ತಂತ್ರಜ್ಞಾನ ಕ್ಷೇತ್ರದಲ್ಲಿ ಉದಯೋನ್ಮುಖ ಆವಿಷ್ಕಾರಗಳ ಮಹತ್ವವನ್ನು ತಿಳಿಸಿ, ಐಒಟಿ ತಂತ್ರಜ್ಞಾನವು ನಮ್ಮ ದಿನನಿತ್ಯದ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು.

ಕಾರ್ಯಕ್ರಮದ ಒಂದು ಭಾಗವಾಗಿ, “ಟೆಕ್ ಟೈಟನ್ಸ್: ಎಮರ್ಜಿಂಗ್ ಟೆಕ್ನಾಲಜಿಗಳ ಕುರಿತ ಕ್ವಿಜ್” ಅನ್ನು ಹಮ್ಮಿಕೊಳ್ಳಲಾಯಿತು ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಿಜಿಟಲ್ ಫೌಂಡೇಶನ್ ಮತ್ತು ಸೈಬರ್ ಸುರಕ್ಷತೆ, ಡೇಟಾ ಸಂಗ್ರಹಣೆ, ಮತ್ತು ಸಂಚಾರ ನಿರ್ವಹಣೆ ಕುರಿತಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಬಿ.ಸಿ.ಎ. ವಿಭಾಗದ ಉಪನ್ಯಾಸಕಿ ಸೌಜನ್ಯ ಎಚ್ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರು ಮತ್ತು  ಬಿ.ಸಿ.ಎ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here