ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ಚಟುವಟಿಕೆಗಳ ಉದ್ಘಾಟನೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ 2024ನೇ ಸಾಲಿನ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕ ನವೀನ್ ಕೊರೆಯ ನೆರವೇರಿಸಿ ಮಾತನಾಡಿ “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಇದರ ವಿವಿಧ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಜೀವನ ನಡೆಸುವ ಕೌಶಲಗಳನ್ನು ಕಲಿಸುತ್ತದೆ. ಎನ್.ಎಸ್.ಎಸ್ ಸ್ವಯಂಸೇವಕರು ಸಮಾಜದ ಹಿತದ ನಿಮಿತ್ತವೇ ಸರ್ವ ಕೆಲಸಗಳನ್ನು ಮಾಡುತ್ತಾರೆ. ಧೇಯವಾಕ್ಯವೇ ಹೇಳುವಂತೆ ‘ನನಗಾಗಿ ಏನು ಅಲ್ಲ, ಬದಲಾಗಿ ಎಲ್ಲವೂ ನಿಮಗಾಗಿ ‘ ಎಂಬಂತೆ ಲೋಕ ಹಿತದ ಕಾರ್ಯವೇ ಮೊದಲ ಆದ್ಯತೆ ಎನ್.ಎಸ್.ಎಸ್ ಸ್ವಯಂ ಸೇವಕರದ್ದು. ಎಲ್ಲಾ ಸ್ವಯಂಸೇವಕರು ಈ ನಿಟ್ಟಿನಲ್ಲಿ ಕೆಲಸ ಮಾಡಿ” ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ ಮಾತನಾಡಿ,”ಎನ್.ಎಸ್.ಎಸ್ ಯೋಜನೆಯಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದವರು, ಭವಿಷ್ಯದಲ್ಲಿ ಸಮಾಜದ ಆಸ್ತಿಯಾಗುತ್ತಾರೆ. ಸಮಾಜದ ಏಳು ಬೀಳುಗಳನ್ನು ವಿದ್ಯಾರ್ಥಿಯಾಗಿದ್ದಾಗಲೇ ತಿಳಿಯುವಕಾರಣ, ಭವಿಷ್ಯದಲ್ಲಿ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕೊಡುವವರಾಗುತ್ತಾರೆ. ಈ ಕಾರಣದಿಂದ ಅವರು ಸಮಾಜದಲ್ಲಿ ಗಣ್ಯಸ್ಥಾನವನ್ನು ಪಡೆಯುತ್ತಾರೆ. ಎನ್.ಎಸ್.ಎಸ್ ಸ್ವಯಂಸೇವಕರಾಗಿ ನಿಷ್ಠೆಯಿಂದ ಸೇವೆಯನ್ನು ಮಾಡಿದರೆ, ಉನ್ನತಮಟ್ಟಕ್ಕೆ ಖಂಡಿತವಾಗಿಯೂ ನೀವೂ ಏರುತ್ತಿರಿ” ಎಂದರು.

ಕಾಲೇಜಿನ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಕೀರ್ತನ್ ಬಿ.ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎನ್.ಎಸ್.ಎಸ್ ಸಹಯೋಜನಾಧಿಕಾರಿ ತಿಲಕಾಕ್ಷ, ಉಪನ್ಯಾಸಕ ಶಿವಪ್ರಸಾದ, ಎನ್.ಎಸ್.ಎಸ್ ನಾಯಕ ಅಶ್ವಥ್, ನಾಯಕಿ ಮಾನ್ಯ ಉಪಸ್ಥಿತರಿದ್ದರು.


ಎನ್.ಎಸ್.ಎಸ್ ನಾಯಕಿ ಮಾನ್ಯ ಸ್ವಾಗತಿಸಿದರು. ವಿದ್ಯಾರ್ಥಿನಿ ಹಂಸಿನಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ನಿಶ್ಮಾ ಕಾರ್ಯಕ್ರಮ ನಿರೂಪಿಸಿದರು. ಸಹನಿ ಮತ್ತು ತಂಡದವರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here