ಪುತ್ತೂರು: ಗುಡ್ಡ ಕುಸಿದ ಬಳಿಕ ನಾಲ್ಕು ದಿನಗಳ ಸಮಾರೋಪಾದಿಯ ಮಣ್ಣು ತೆರವು ಕಾರ್ಯಾಚರಣೆ ನಡೆದಿದ್ದು ಇದೀಗ ರೈಲು ಮಾರ್ಗ ಸಂಚಾರಕ್ಕೆ ಯೋಗ್ಯವಾದ ಹಿನ್ನೆಲೆಯಲ್ಲಿ ಆ.14ರಂದು ಮಂಗಳೂರು ಬೆಂಗಳೂರು ರೈಲು ಸಂಚಾರ ಆರಂಭಗೊಂಡಿದೆ.
ಜು. 26ರ ರಾತ್ರಿ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಸಮೀಪದ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿ ರೈಲು ಸಂಚಾರ ತಡೆ ಹಿಡಿದು ದುರಸ್ತಿ ಕಾರ್ಯ ಆರಂಭಿಸಲಾಗಿತ್ತು. ಸುಮಾರು 12 ದಿನಗಳ ನಿರಂತರ ದುರಸ್ತಿ ಕಾರ್ಯಾಚರಣೆ ಬಳಿಕ ಆ.8ರಂದು ರೈಲು ಸಂಚಾರ ಆರಂಭಗೊಂಡಿತ್ತಾದರೂ ಸಕಲೇಶಪುರ ಬಳ್ಳುಪೇಟೆ ನಡುವೆ ರೈಲು ಮಾರ್ಗಕ್ಕೆ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಮತ್ತೆ ರೈಲು ಸಂಚಾರ ನಿಲುಗಡೆಯಾಗಿತ್ತು. ಇದೀಗ ಮಣ್ಣು ತೆರವು ಪೂರ್ಣಗೊಂಡ ಹಿನ್ನಲೆಯಲ್ಲಿ ರೈಲು ಸಂಚಾರ ಆರಂಂಭಗೊಂಡಿದೆ.