ನೀರಾಜೆ ನೂರುಲ್ ಹುದಾ ಮದ್ರಸದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

0

ಕಡಬ: ನೂರುಲ್ ಹುದಾ ಮದ್ರಸ ನೀರಾಜೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.


ಇಬ್ರಾಹಿಂ ದಾರಿಮಿ ದುವಾಶಿರ್ವಚನ ನೀಡಿದರು. ಮಸೀದಿಯ ಅಧ್ಯಕ್ಷ ಎನ್. ಸಿದ್ದೀಕ್‌ರವರು ಧ್ವಜಾರೋಹಣ ನೆರವೇರಿಸಿದರು. ಅಬೂಬಕ್ಕರ್ ಕೌಸರಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಹಾರಿಸ್ ಅಝ್ಹರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಝೀರ್ ಎನ್.ಕೆ, ಹನೀಫ್, ಸಿರಾಜ್, ನಝೀರ್ ಎನ್.ಎಮ್, ಯೂಸುಫ್ ಎನ್, ಇಸ್ಮಾಯಿಲ್, ಪುತ್ತುಕುಂಞಿ, ಅಝೀಝ್ ಪಾಲ್ತಾಡಿ, ಎಸ್ಕೆ,ಎಸ್,ಎಫ್ ಕಾರ್ಯಕರ್ತರು, ವಿಖಾಯ ಸದಸ್ಯರು, ಯಂಗ್‌ಮೆನ್ಸ್ ಪದಾಧಿಕಾರಿಗಳು, ಮಕ್ಕಳ ಪೋಷಕರು, ಊರಿನ ಪ್ರಮುಖರು ಉಪಸ್ಥಿತರಿದ್ದರು. ಅನ್ಸಾರ್ ಎನ್ ವಂದಿಸಿದರು.

LEAVE A REPLY

Please enter your comment!
Please enter your name here