ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಆ.13ರಂದು ಆಟಿದ ಕೂಟ ಹಾಗೂ ಸಾಂಪ್ರದಾಯಿಕ ದಿನದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಾಂಪ್ರದಾಯಿಕ ಶೈಲಿಯಲ್ಲಿ ಉದ್ಗಾಟನೆಗೊಂಡು ಪ್ರಾರಂಭವಾದ ಈ ಕಾರ‍್ಯಕ್ರಮದ ಉದ್ಘಾಟಕರಾದ ಶಶಾಂಕ ನೆಲ್ಲಿತ್ತಾಯ ಮತನಾಡಿ “ಹಿರಿಯರು ಬಾಳಿ ಬದುಕಿದ ದಿನದ ಅನಿವಾರ‍್ಯತೆಯನ್ನು ತಿಳಿಸುವ ತಿಂಗಳು ಆಟಿ. ನಮ್ಮ ಹಿರಿಯರು ಕಷ್ಟದ ಕಾಲದಲ್ಲಿ ಬದುಕು ಕಳೆದ ನೆನಪನ್ನು ಈ ಸಂದರ್ಭದಲ್ಲಿ ಮಾಡಿಕೊಳ್ಳಬೇಕಾಗಿದೆ. ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಮುಂದಿನ ಯುವಪೀಳಿಗೆಗೆ ತಿಳಿಸಿ ಉಳಿಸುವ ಕಾರ‍್ಯ ನಾವು ಮಡೋಣ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೊನ್ನಪ್ಪ ಕಲ್ಲೇಗ-ತುಳು ಸಾಹಿತಿ,ಅಧ್ಯಕ್ಷರು ತುಡರ್ ಸಮಿತಿ ಶೇವಿರೆ,ಕಲ್ಲೇಗ ಮಾತನಾಡಿ “ಆಟಿ ತಿಂಗಳಲ್ಲಿ ಉಪಯೋಗಿಸುವ ಆಹಾರ ಪದಾರ್ಥಗಳು ಅರೋಗ್ಯ ಹಾಗೂ ಜೀರ್ಣಕ್ರಿಯೆ ವೃದ್ದಿಮಾಡಿ,ಜಠರ ಶುದ್ಧೀಕರಣ ಮಾಡುವ ತಿನಿಸುಗಳಾಗಿವೆ.ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಮೂಢನಂಬಿಕೆಗಳನ್ನು ಮೂಲನಂಬಿಕೆಗಳೆಂದು ಪರಿಗಣಿಸಿ ಉಳಿಸಿ ಬೆಳೆಸುವ ಕಾರ‍್ಯ ಮಡೋಣ,ನಮ್ಮ ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ”ಎಂದರು.
ಆಡಳಿತ ಮಂಡಳಿಯ ಸಂಚಾಲಕ ಮಹಾದೇವ ಶಾಸ್ತ್ರಿ “ನಮ್ಮ ಸಂಸ್ಕೃತಿಯನ್ನು ಗುರುತಿಸಿ ಉಳಿಸಿಕೊಂಡು ಸಮಾಜದಲ್ಲಿ ಬಾಳಿ ಬದುಕಬೇಕು” ಎಂದು ಶುಭ ನುಡಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ವಹಿಸಿದ್ದರು. ಈ ಕಾರ‍್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ರವಿಮುಂಗ್ಲಿ ಮನೆ,ಈಶ್ವರಚಂದ್ರ,ಅಚ್ಯುತಪ್ರಭು, ಸನತ್ ಕುಮಾರ್ ರೈ,ಶಿವಕುಮಾರ್. ಹಾಗೂ ಪ್ರಾಂಶುಪಾಲ ಮುರಳೀಧರ್ ಎಸ್,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರವಿರಾಮ.ಎಸ್ ಮತ್ತು ಸುಧಾಕುಮಾರಿ,ಉಪನ್ಯಾಸಕ ವೃಂದ,ಸಿಬ್ಬಂದಿವರ್ಗ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ನಾಯಕ ಅಂಶಿಕ್ ಜಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು.ಹಾಗೂ ವಿದ್ಯಾರ್ಥಿ ಕಾರ‍್ಯದರ್ಶಿ ಹೃತ್ವಿಕ್ ಎ.ಸಿ.ವಂದನಾರ್ಪಣೆ ಗೈದರು. ಶೃಜನ್ಯ ತಂಡದವರು ಪ್ರಾರ್ಥಿಸಿದರು. ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಜ್ಯೋತಿಕಾ,ಶ್ರೀಮಾನಸ,ನಿಶ್ಮಿತಾ ಕಾರ‍್ಯಕ್ರಮ ನಿರೂಪಿಸಿದರು.
ಕಾಲೇಜಿನಲ್ಲಿ ಆಟಿಕೂಟದ ಪ್ರಯುಕ್ತ ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ಪ್ರದರ್ಶಿಸಿದರು. ಸಭಾಕಾರ‍್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ‍್ಯಕ್ರಮಗಳು ಜರುಗಿದವು.