ಅ.19-22, ನ.1-2:ಹೊಳ್ಳ ಕ್ರ್ಯಾಕರ್ಸ್ ರವರಿಂದ ದೀಪಾವಳಿ ಪಟಾಕಿಮೇಳ

0

ರೂ.500ರ ಖರೀದಿಗೆ ಕೂಪನ್ ನೊಂದಿಗೆ ಆಕರ್ಷಕ ಚಿನ್ನ, ಬೆಳ್ಳಿ ನಾಣ್ಯದ ಬಹುಮಾನ | 2 ಕಡೆ ಸ್ಟಾಲ್ ಗಳು

ಪುತ್ತೂರು: ಈ ದೀಪಾವಳಿಯನ್ನು ಆಚರಿಸೋಣ ಗ್ರೀನ್ ಪಟಾಕಿಗಳೊಂದಿಗೆ ಎಂಬ ಟ್ಯಾಗ್ ಲೈನ್ ನೊಂದಿಗೆ ಹೊಳ್ಳ ಕ್ರ್ಯಾಕರ್ಸ್ ಸಂಸ್ಥೆಯು ದೀಪಾವಳಿ ಪ್ರಯುಕ್ತ ಅ.19, 20,21,22 ಹಾಗೂ ತುಳಸಿ ಪೂಜೆಯ ಪ್ರಯುಕ್ತ ನ.1,2 ರಂದು ಪಟಾಕಿಮೇಳದ ಸ್ಟಾಲ್ ಅನ್ನು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸ್ಟಾಲ್ ನಂ.4 ಹಾಗೂ 5ರಲ್ಲಿ ಮತ್ತು ಮುಕ್ರಂಪಾಡಿ ಬೈಪಾಸ್ ರಸ್ತೆಯ ಹನುಮವಿಹಾರಿ ಎಂಬಲ್ಲಿ ಆರಂಭವಾಗಲಿದೆ.


ಎಲ್ಲಾ ಪ್ರತಿಷ್ಟಿತ ಕಂಪೆನಿಗಳ ಗಿಪ್ಟ್ ಬಾಕ್ಸ್ ಹಾಗೂ ಸಿಡಿಮದ್ದು ಪಟಾಕಿಗಳು ಇಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ ಜೊತೆಗೆ ಪ್ರತಿ ರೂ. 500ರ ಖರೀದಿಗೆ ಕೂಪನ್ ನೊಂದಿಗೆ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಲಭಿಸಲಿದೆ. ಪ್ರಥಮ ಬಹುಮಾನವಾಗಿ ಚಿನ್ನದ ನಾಣ್ಯ ಹಾಗೂ ದ್ವಿತೀಯ ಬಹುಮಾನವಾಗಿ ಬೆಳ್ಳಿ ನಾಣ್ಯವನ್ನು ಬಹುಮಾನವಾಗಿ ಆಯೋಜಕರು ನೀಡುತ್ತಿದ್ದು ಪಟಾಕಿ ಪ್ರಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೊಳ್ಳ ಕ್ರ್ಯಾಕರ್ಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here