ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ‌ 14ನೇ ವರ್ಷದ ವರಮಹಾಲಕ್ಷ್ಮಿ‌ ವೃತ ಪೂಜೆ

0

ಪುತ್ತೂರು: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಆಶ್ರಯದಲ್ಲಿ‌ ಪ್ರಗತಿಬಂಧು ಸ್ವಸಹಾಯ ಸಂಘಗಳ‌ ಒಕ್ಕೂಟ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ, ಶಾಂತಿನಗರ ಮತ್ತು ಸೇಡಿಯಾಪು ಇದರ ಸಹಕಾರದೊಂದಿಗೆ 14ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ಆ.16ರಂದು ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯೀ ಸಭಾಂಗಣದಲ್ಲಿ ನಡೆಯಿತು.

ಬೆಳಿಗ್ಗೆ ಕಲಶ ಪ್ರತಿಷ್ಠೆ ಹಾಗೂ ಶ್ರೀ ವರಮಹಾಲಕ್ಷ್ಮಿ‌ ಪೂಜೆ ಪ್ರಾರಂಭ, ಲಲಿತ ಸಹಸ್ರನಾಮ‌ ಪಾರಾಯಣ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಿತು. ಅರ್ಚಕ ಬಾಲಕೃಷ್ಣ ಐತಾಳ್‌ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ‌ ನೆರವೇರಿತು.

ಶಾಸಕ ಅಶೋಕ್ ರೈ ಭಾಗಿ
ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಿದ್ದರು.

ವರಮಹಾಲಕ್ಷ್ಮಿ ಪೂಜಾ ಸಮಿತಿಯ ಗೌರವಾಧ್ಯಕ್ಷರಾದ ರೇಣುಕಾ ಮುರಳೀಧರ ರೈ ಮಠಂತಬೆಟ್ಟು, ಸೌಮ್ಯ ಶಿವಪ್ರಕಾಶ್ ಕೋಡಿ ಮೋನಡ್ಕ, ಅಧ್ಕಕ್ಷೆ ಶ್ರದ್ಧಾ ಸುದೇಶ್ ಶೆಟ್ಟಿ ಶಾಂತಿನಗರ, ಪ್ರಧಾನ ಕಾರ್ಯದರ್ಶಿ ವಿನುತಾ ಜಯಪ್ರಕಾಶ್ ಬದಿನಾರು, ಕೋಶಾಧಿಕಾರಿ ಪ್ರೇಮಲತಾ ದೇವದಾಸ ಪೂಜಾರಿ ಡೆಕ್ಕಾಜೆ, ಗೌರವ ಸಲಹೆಗಾರರಾದ ಪದ್ಮಲತಾ ಜಗನ್ನಾಥ ಶೆಟ್ಟಿ ನಡುಮನೆ, ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಭುವನೇಶ್ವರಿ ನಾಗೇಶ್ ಶರ್ಮ ಮಠದಬೆಟ್ಟು, ರಾಧಿಕಾ ರಮೇಶ್ ಸಾಮಂತ್ ನೆಕ್ಕರಾಜೆ, ಅನುರಾಧ ರಮೇಶ್ ನಾಯಕ್ ನೆಕ್ಕರಾಜೆ, ಯಮುನಾ ಡೆಕ್ಕಾಜೆ, ಉಪಾಧ್ಯಕ್ಷರಾದ ವಿಜಯ ಎಸ್. ಗೌಡ ಬಾರ್ತಿಕುಮೇರು, ಶಿಲ್ಪಾ ಆರ್. ಭಟ್, ಅಮಿತಾ ಗೌತಮ್, ಜೊತೆ ಕಾರ್ಯದರ್ಶಿಗಳಾದ ಸವಿತಾ ವಿಕ್ರಂ ಶೆಟ್ಟಿ ಅಂತರ, ವಿದ್ಯಾ ಬಾಬು ಆಚಾರ್ಯ ಕೊಂಬಕೋಡಿ, ಭವ್ಯಾ ದಾಮೋದರ ಶೆಟ್ಟಿ ಮಠಂತಬೆಟ್ಟು, ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು, ಸ್ಪೂರ್ತಿ ರಾಜಮಣಿ ರೈ ಮಠಂತಬೆಟ್ಟು, ಪ್ರೇಮಲತಾ ವಿ. ಶೆಟ್ಟಿ ದೇಂತಾರು ಸಹಿತ ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here