ಬೊಳುವಾರು ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0


ಪುತ್ತೂರು: ಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಅ.16ರಂದು ಸಂಜೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಯು ಅರ್ಚಕರಾದ ವೆ.ಮೂ. ಶ್ರೀಧರ ಭಟ್ ಕಬಕರವರ ನೇತೃತ್ವದಲ್ಲಿ ನಡೆಯಿತು.


ಸಂಜೆ ಕಲಶ ಪ್ರತಿಷ್ಠೆ, ಲಲಿತಾ ಸಹಸ್ರನಾಮ ಪಠಣ, ಕ್ಷೇತ್ರದ ದುರ್ಗಾಪರಮೇಶ್ವರೀ ಭಜನಾ ಮಂಡಳಿ ವತಿಯಿಂದ ಭಜನೆ, ವೇಣುಗೋಪಾಲ್‌ರವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು.

ರಾತ್ರಿ ವರಮಹಾಲಕ್ಷ್ಮೀಪೂಜೆಯ ಮಂಗಳಾರತಿ, ಶ್ರೀ ದುರ್ಗಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಫಲಾಹಾರ ನಡೆಯಿತು.

ಇದರೊಂದಿಗೆ ಆಟಿ ತಿಂಗಳ ವಿಶೇಷ ಪೂಜೆ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here