ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ ನರಿಮೊಗರುನಲ್ಲಿ ರಕ್ಷಾ ಬಂಧನ ಮತ್ತು ಸಂಸ್ಕತ ಸಪ್ತಾಹ ಕಾರ್ಯಕ್ರಮ ಆ.20ರಂದು ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯನಿ ಜಯಮಾಲಾ ವಿ ಎನ್ ಮಾತನಾಡಿ ದೈವಿಕ ಭಾಷೆ ಸಂಸ್ಕೃತ ಹಿಂದೂ ಧರ್ಮದ ಆಧಾರವಾಗಿದ್ದು ಭವಿಷ್ಯದಲ್ಲಿ ಅದರ ಅರಿವು ಎಲ್ಲರಲ್ಲೂ ಮೂಡುವಂತೆ ಮಾಡಬೇಕಾಗಿದೆ , ರಕ್ಷೆಯಲ್ಲಿ ಇರುವ ಪ್ರತಿಯೊಂದು ಎಳೆಗಳನ್ನು ಬೇರ್ಪಡಿಸಿದರೆ ಅದಕ್ಕೆ ಯಾವುದೇ ಅಸ್ತಿತ್ವ ಇರುವುದಿಲ್ಲ ಅಂತಹ ಎಳೆಗಳನ್ನು ಒಟ್ಟಾಗಿ ಸೇರಿಸಿದ್ದಲ್ಲಿ ಭದ್ರವಾದ ಒಗ್ಗಟ್ಟನ್ನು ಪ್ರತಿಪಾದಿಸುತ್ತದೆ ಎಂದರು.
ಸಭಾಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ ಸಂಸ್ಕೃತದ ಮಹತ್ವವನ್ನು ತಿಳಿಸುತ್ತಾ ನಮ್ಮ ಶಾಲಾ ಹಂತದಲ್ಲಿ ಸಂಸ್ಕೃತವನ್ನು ಓದುವ ಅವಕಾಶ ಇರಲಿಲ್ಲ. ಇಂದು ನಮ್ಮ ವಿದ್ಯಾಸಂಸ್ಥೆಯಲ್ಲಿ ಸಂಸ್ಕೃತ ಭಾಷೆಯನ್ನು ಕೇಳುವ ಯೋಗ ಬಂದಿದ್ದು ಬಹಳ ಖುಷಿ ತಂದಿದೆ ಎಂದರು. ಸಂಸ್ಕೃತ ಶಿಕ್ಷಕ ಕುಶಲ .ಎನ್ ,ಸಂಸ್ಕೃತ ಸಪ್ತಾಹದ ಬಗ್ಗೆ ಮತ್ತು ಶಿಕ್ಷಕಿ ವಾಣಿ ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿ ಪ್ರತೀಕ್ ಎನ್ ಎಸ್ ಪ್ರಾರ್ಥಿಸಿದರು.ಉಷಾ ಬಿ ವಂದಿಸಿದರು. ಸೌಮ್ಯ ಎ ಎಮ್ ಕಾರ್ಯಕ್ರಮ ನಿರೂಪಿಸಿದರು.