ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ಚಂದ್ರಯಾನ-3ರ ಯಶಸ್ಸಿನ ದಿನವನ್ನು ನೆನಪಿಸುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸಂತ ಫಿಲೋಮಿನಾ ಕಾಲೇಜು ಪುತ್ತೂರಿನ ನಿವೃತ್ತ ಉಪ ಪ್ರಾಂಶಪಾಲ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಆದ ಡಾ. ಎ ಪಿ ರಾಧಾಕೃಷ್ಣ ‘ಬಾಹ್ಯಾಕಾಶ ವಿಜ್ಞಾನ’ದ ಕುರಿತು ವಿಶೇಷ ಉಪನ್ಯಾಸವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ ವಿಜ್ಞಾನವು ಅನಂತವಾದ ಕುತೂಹಲ, ಅವಕಾಶಗಳ ಸಾಗರ, ಜಗತ್ತಿನ ಆಗುಹೋಗುಗಳ ಮೂಲ. ಕೇವಲ ಒಂದು ಬೆಳಕು ಎಂಬ ವಿಷಯದಲ್ಲಿ ಅಗಾಧ ವೈಜ್ಞಾನಿಕ ಸಂಗತಿಗಳು ಅಡಗಿವೆ. ರಾಷ್ಟ್ರದಲ್ಲಿ ನಡೆಯುವ ಅನೇಕ ವೈಜ್ಞಾನಿಕ ಸಂಶೋಧನೆಗಳ ಸಾಧನೆಯ ಪಟ್ಟಿ ಬೆಳೆಯುವಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕು ಎಂದು ಶುಭಕೋರಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಜ್ಞಾನ ಸಂಘದ ಸಂಯೋಜಕ ಪ್ರೊ. ಗಾಯತ್ರಿ ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಸುಪ್ರಜಾ ವಂದಿಸಿದರು. ಸೌಪರ್ಣಿಕ ಕಾರ್ಯಕ್ರಮ ನಿರೂಪಿಸಿದರು.