ಟೇಬಲ್ ಟೆನ್ನಿಸ್ ಪಂದ್ಯಾಟ: ಫಿಲೋಮಿನಾ ಪ.ಪೂ.ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಶಿಕ್ಷಣ  ಇಲಾಖೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇದರ ಜಂಟಿ ಆಶ್ರಯದಲ್ಲಿ ಆಗಸ್ಟ್27 ರಂದು ನಡೆದ  ಪುತ್ತೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ‘ಟೇಬಲ್ ಟೆನ್ನಿಸ್ ಪಂದ್ಯಾಟ ಸ್ಪರ್ಧೆ -2024-25’  ಸ್ಪರ್ಧೆಯಲ್ಲಿ ಸಂತ  ಫಿಲೋಮಿನಾ ಪ.ಪೂ.ಕಾಲೇಜಿನ
ಬಾಲಕರ ವಿಭಾಗ ಪ್ರಥಮ ಹಾಗೂ ಬಾಲಕಿಯರ ವಿಭಾಗ  ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಬಾಲಕರ ವಿಭಾಗವು ಇದೇ ಬರುವ ಆಗಸ್ಟ್ 30ರಂದು ಸುರತ್ಕಲ್  ಗೋವಿಂದ ದಾಸ ಪದವಿ ಪೂರ್ವ ಕಾಲೇಜುನಲ್ಲಿ ನಡೆಯಲಿರುವ ಮಂಗಳೂರು  ಜಿಲ್ಲಾ ಮಟ್ಟದ  ಬಾಲಕ – ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ.


        ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಜೀವನ್ ಮ್ಯಾತ್ಯು, ಮೊಹಮ್ಮದ್ ಫಲೀಲ್ ಹಾಗೂ ಪ್ರಥಮ ವಾಣಿಜ್ಯ ವಿಭಾಗದ  ನಿಹಾಲ್ ಮತ್ತು ಬಾಲಕಿಯರ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ  ಎಂ ದೀಪಾ ನಾಯಕ್, ಪ್ರಥಮ ಕಲಾ ವಿಭಾಗದ ಜೀವಿತಾ ಮತ್ತು ಅಸ್ಥಿಕಾ,ಹಾಗೂ ದ್ವಿತೀಯ ವಿಜ್ಞಾನ ವಿಭಾಗದ  ಮಾನ್ಯ ವೈ. ಬಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.


         ಕಾಲೇಜಿನ  ಪ್ರಾಂಶುಪಾಲ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ  ಆಟಗಾರರನ್ನು ಅಭಿನಂದಿಸಿ ಶುಭಹಾರೈಸಿದರು .ದೈಹಿಕ ಶಿಕ್ಷಣ ನಿರ್ದೇಶಕ ಏಲಿಯಾಸ್ ಪಿಂಟೋ ಮತ್ತು  ರಾಜೇಶ್ ಮೂಲ್ಯ  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here