ಈಶ್ವರಮಂಗಲ: ಪಂಚೋಡಿಯಲ್ಲಿ ವಿದ್ಯುತ್ ಕಂಬ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತಡೆ

0

ಈಶ್ವರಮಂಗಲ: ಇಲ್ಲಿನ ಪಂಚೋಡಿಯಲ್ಲಿ ಇಂದು ಬೆಳಗ್ಗೆ ಬೀಸಿದ ಗಾಳಿ ಮಳೆಗೆ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬವೊಂದು ರಸ್ತೆಗೆ ಮುರಿದು ಬಿದ್ದಿದೆ. ಕ್ಷಣ ಮಾತ್ರದಲ್ಲಿ ರಿಕ್ಷಾವೊಂದು ಅಪಾಯದಿಂದ ಪಾರಾಗಿದ್ದು, ಯಾವುದೇ ಅನಾಹುತ ಸಂಭವಿಸಲಿಲ್ಲ. ಬೆಳಗ್ಗಿನ ಶಾಲಾ ಬಸ್ಸುಗಳು ಸಂಚರಿಸುವ ಹೊತ್ತಲ್ಲೇ ಈ ಅವಘಡ ಸಂಭವಿಸಿದ್ದು ಕೆಲವು ಹೊತ್ತು ವಾಹನ ಸಂಚಾರಕ್ಕೆ ತೊಂದರೆಯಾಯಿತಾದರೂ ಕೂಡಲೇ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here