ತಾಳ್ಮೆಯ ಸಂಘಟನಾತ್ಮಕ ಕೆಲಸ ಉತ್ತಮ‌ ಫಲಿತಾಂಶ – ಪುತ್ತೂರು ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

0

ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರ ಘೋಷಣೆ

ಪುತ್ತೂರು: ತಾಳ್ಮೆಯಿಂದ ಸಂಘಟನಾತ್ಮಕ ಕೆಲಸ ಮಾಡಿದಾಗ ಎಲ್ಲಿಯೋ ಒಂದು ಕಡೆ ಉತ್ತಮ‌ ಫಲಿತಾಂಶ ಬರುತ್ತದೆ. ಈ ನಿಟ್ಟಿನಲ್ಲಿ ಪುತ್ತೂರು ಕ್ಷೇತ್ರ ಜಿಲ್ಲೆಯಲ್ಲಿ‌ ಕೊಟ್ಟ ಎಲ್ಲಾ ಕೆಲಸವನ್ನು ಸಂಘಟನಾತ್ಮಕ ಕೆಲಸ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಹೇಳಿದರು.


ಪುತ್ತೂರು ಜೈನ ಭವನದಲ್ಲಿ ಸೆ.6ರಂದು ನಡೆದ ಬಿಜೆಪಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಅಭಿಯಾನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯಲ್ಲಿ ಒಂದು ಸಲ ಪದಾಧಿಕಾರಿಗಳನ್ನು ನೇಮಕ ಮಾಡಿದ ಬಳಿಕ ಗೊಂದಲ ಬೇಡ. ಒಂದು ಸಲ ಮಾಡಿದ ನಿರ್ಧಾರಕ್ಕೆ ಎಲ್ಲರು ಬದ್ದರಾಗಿರಬೇಕು. ಬಿಜೆಪಿ ಬಿಟ್ಟು ನಮ್ಮಲ್ಲಿ ಬೇರೆ ಆಲೋಚನೆ ಮಾಡಬಾರದು. ಹಿರಿಯರ ಮಾರ್ಗದರ್ಶನವನ್ನು ಪಡೆದು ಅವರ ವಿಶ್ವಾಸ ಪಡೆಯಬೇಕು. 57 ಮಹಾಶಕ್ತಿ ಕೇಂದ್ರಕ್ಕೆ ಜವಾಬ್ದಾರಿ ಕೊಡುವಾಗ ಹುಡುಕಿ‌ಹುಡುಕಿ ಕೊಟ್ಡಿದ್ದೇವೆ. ರಾಜಕೀಯ ವ್ಯವಸ್ಥೆಯ ಮಧ್ಯೆ ಸದಸ್ಯತ್ವ ಅಭಿಯಾನ ಕೈಗೊಂಡಿದ್ದೇವೆ. ಮಂಗಳೂರು ಜಿಲ್ಲೆ ಸದಸ್ಯತ್ವ ಅಭಿಯಾನದಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಹಾಗಾಗಿ ಸದಸ್ಯತ್ವ ಅಭಿಯಾನವನ್ನು ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆಸಬೇಕು. ಪುತ್ತೂರು ಪ್ರಥಮ ಸ್ಥಾನ ಪಡೆಯಬೇಕು. ಇದಕ್ಕಾಗಿ ಲಿಂಕ್ ಕಳಿಸಿ ಕೂತುಕೊಳ್ಳಬೇಡಿ, ನಮ್ಮ ನಮ್ಮ ಬೂತ್ ನಲ್ಲಿ ಮನೆ ಮನೆಗೆ ಹೋಗಿ ಸದಸ್ಯತ್ವ ಮಾಡಬೇಕು ಎಂದರು.


ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಡಿ, ಸದಸ್ಯತ್ವ ಅಭಿಯಾನದ ಜಿಲ್ಲೆಯ ಸಂಯೋಜಕ ವಿಕಾಸ್ ಪುತ್ತೂರು, ಸಂಚಾಲಕ ಯತೀಶ್ ಆರುವಾರು, ಜಿಲ್ಲಾ ಪರಿಶಿಷ್ಟ ಮೋರ್ಚ ಅಧ್ಯಕ್ಷ ಹರೀಶ್ ಬಿಜತ್ರೆ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್ ಸಿ ನಾರಾಯಣ, ಪ್ರಭಾರಿ ಸುನಿಲ್ ದಡ್ಡು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಶಿವ ಕುಮಾರ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಉಮೇಶ್ ಕೋಡಿಬೈಲು, ಗೋಪಾಲಕೃಷ್ಣ ಹೇರಳೆ, ನಿತೀಶ್ ಕುಮಾರ್ ಶಾಂತಿವನ, ಸಹಿತ ಹಲಾವರು ಮಂದಿ ಉಪಸ್ಥಿತರಿದ್ದರು. ಹರಿಪ್ರಸಾದ್ ಯಾದವ್, ಯುವರಾಜ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಕೊನೆಯಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜೆರೆಮಾರು ಅವರು ಉಪ್ಪಿನಂಗಡಿ, ಬೆಳ್ಳಿಪ್ಪಾಡಿ, ನೆಕ್ಜಿಲಾಡಿ, ಬಜತ್ತೂರು, ಹಿರೇಬಂಡಾಡಿ, ಆರ್ಯಾಪು, ಬನ್ನೂರು, ಪಡ್ನೂರು, ಚಿಕ್ಜಮುಡ್ನೂರಯ, ಬೆಟ್ಟಂಪಾಡಿ, ಇರ್ದೆ, ಕುರಿಯ, ಪಾಣಾಜೆ, ನರಿಮೊಗರು, ಶಾಂತಿಗೋಡು, ಸರ್ವೆ, ಮುಂಡೂರು, ಕೆಮ್ಮಿಂಜೆ, ಕೆದಂಬಾಡಿ, ಕೆಯ್ಯೂರು, ಒಳಮೊಗ್ರು ಸಹಿತ ಹಲವು ಮಹಾ ಶಕ್ತಿಕೇಂದ್ರ ಮತ್ತು ಶಕ್ತಿ‌ಕೇಂದ್ರಗಳ ಪ್ರಮುಖರ ಘೋಷಣೆ ಮಾಡಿದರು.

LEAVE A REPLY

Please enter your comment!
Please enter your name here