ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ ಆಚರಣೆ

0

ಬಡಗನ್ನೂರು:  ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ, ಪಡುಮಲೆ ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೆ. 7ರಂದು ಶ್ರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜರಗಲಿರುವುದು.

ಕಾರ್ಯಕ್ರಮಗಳು:-
ಸೆ.7 ರಂದು ಪೂರ್ವಾಹ್ನ ಗಂಟೆ 8-00ಕ್ಕೆ  ಕದಿರು ಪೂಜೆ, 9 ಕ್ಕೆ  ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಪೂರ್ವಾಹ್ನ ಗಂಟೆ 12.30ರಿಂದ ದೇವಾಲಯದಲ್ಲಿ ಶ್ರೀ ದೇವರ ಪೂಜೆ, ಶ್ರೀ ಗಣಪತಿ ಮಹಾ ಮಂಗಳಾರತಿ ಪ್ರಸಾದ ವಿತರಣೆ  ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸ್ಪರ್ಧೆಗಳು:-
ಪೂರ್ವಾಹ್ನ ಗಂ 10 ರಿಂದ ಶಾಲಾ ಮಕ್ಕಳಿಗೆ ಗಣೇಶನ ಚಿತ್ರಬಿಡಿಸುವುದು ಮತ್ತು ಭಕ್ತಿಗೀತೆ, ಹಾಗೂ ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ ನಡೆಯಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳು;-
ಪೂರ್ವಾಹ್ನ ಗಂಟೆ 11 ರಿಂದ  ಪುನೀತ್ ಆರ್ಕೆಸ್ಟ್ರಾ ಪುತ್ತೂರು ಇವರಿಂದ ಭಕ್ತಿ ರಸಮಂಜರಿ, ಕರುನಾಡ ಗಾನಗಂಧರ್ವ ಬಿರುದಾಂಕಿತಾ ಮಿಥುನ್ ರಾಜ್ ವಿದ್ಯಾಪುರ್ ಭಾಗವಹಿಸಲಿದ್ದಾರೆ. ಅಪರಾಹ್ನ 2 ರಿಂದ ವಾಯ್ಸ್ ಆಫ್ ಆರಾಧನ’ ಮೂಡಬಿದ್ರೆ ತಂಡದವರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ಸಂಜೆ ಗಂ 4.30ಕ್ಕೆ ಶ್ರೀ ಗಣೇಶನಿಗೆ  ಮಹಾಪೂಜೆ ಪ್ರಸಾದ ವಿತರಣೆ. ಬಳಿಕ ಶ್ರೀ ಗಣಪತಿ ದೇವರ ವೈಭವದ ಶೋಭಾಯಾತ್ರೆಯು ಆರಂಭಗೊಂಡು ಗೊಂಬೆ ಕುಣಿತ ಭಜನೆ, ಸಿಂಗಾರಿ ಮೇಳ, ಡಿ.ಜೆ. ಇತ್ಯಾದಿ ವೈವಿಧ್ಯಮಯ ಆಕರ್ಷಣೆಗಳೊಂದಿಗೆ ಮೈಂದನಡ್ಕ-ಕೊೖಲ-ಮುಡಿಪಿನಡ್ಕ ರಾಜಬೀದಿಯಲ್ಲಿ ಸಂಚಾರಿಸಿ, ಪಟ್ಟೆ ಶ್ರೀ ಕೃಷ್ಣ ಯುವಕ ಮಂಡಲ ಇವರ ಸಹಕಾರದೊಂದಿಗೆ ಪಟ್ಟೆ ಅರೆಪ್ಪಾಡಿ ಕ್ಷೀರಹೊಳೆಯಲ್ಲಿ ಶ್ರೀ ಗಣಪತಿ ವಿಗ್ರಹ ವಿಸರ್ಜನೆಗೊಳ್ಳಲಿದೆ.

ಭಕ್ತರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗುವಂತೆ ಸಮಿತಿ ಅಧ್ಯಕ್ಷ ಜನಾರ್ದನ ಪೂಜಾರಿ ಪದಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here