ಸೆ.9: ಮಹಿಳೆಯರ ಮತ್ತು ಮಕ್ಕಳ ರೆಡಿಮೇಡ್ ಡ್ರೆಸ್ ಮಳಿಗೆ ಫ್ಯಾಶನ್ ಝೋನ್ ಶುಭಾರಂಭ

0

ಪುತ್ತೂರು: ಕಳೆದ ಕೆಲವು ವರುಷಗಳಿಂದ ದರ್ಬೆಯಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ರೆಡಿಮೇಡ್ ಡ್ರೆಸ್ ಶಾಪ್ ನ ಸಹಸಂಸ್ಥೆ ಮಕ್ಕಳ ಮತ್ತು ಮಹಿಳೆಯರ ರೆಡಿಮೇಡ್ ಡ್ರೆಸ್ ಮಳಿಗೆ ಫ್ಯಾಶನ್ ಝೋನ್ ಸೆ.9ರಂದು ಬೆಳಿಗ್ಗೆ 10 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟ್ಯಾಂಡ್ ಮುಂಭಾಗದ ಕೇಶವಶ್ರೀ ಶಾಪಿಂಗ್ ಸೆಂಟರ್‌ನಲ್ಲಿ ಶುಭಾರಂಭಗೊಳ್ಳಲಿದೆ. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಲಿದ್ದು, ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಲಾ ಟಿ ಶೆಟ್ಟಿ, ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಕೇಶವಶ್ರೀ ಶಾಪಿಂಗ್ ಸೆಂಟರ್ ಮಾಲಕರಾದ ಅಜಿತ್ ನಾಯಕ್ ಮತ್ತು ಪ್ರಕಾಶ್ ನಾಯಕ್, ದರ್ಬೆ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಸಾದಿಕ್ ಎಸ್.ಎಮ್, ಉದ್ಯಮಿಗಳಾದ ಪ್ರಸನ್ನ ಕುಮಾರ್ ಶೆಟ್ಟಿ, ಸಹಜ್ ರೈ ಬಳಜ್ಜ, ಅಕ್ಷಯ ಕಾಲೇಜ್‌ನ ಜಯಂತ ನಡುಬೈಲು, ಕಿರುತೆರೆ ನಟ ಸುರೇಶ್ ರೈ, ಸುಮಾ ಅಶೋಕ್ ರೈ, ಅನಿತಾ ಹೇಮನಾಥ ಶೆಟ್ಟಿ, ಚಲನಚಿತ್ರ ನಟಿ ರಚನಾ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಲಕರಾದ ಸುನಿಲ್, ಮನೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಭಾರಂಭದ ಪ್ರಯುಕ್ತ ಸೆ.9, 10, 11ರಂದು ಮೆಗಾಸೇಲ್ ಆಯೋಜಿಸಲಾಗಿದ್ದು ಪ್ರತೀ ಖರೀದಿಯ ಮೇಲೆ ಶೇ.20 ರವರೆಗೆ ರಿಯಾಯಿತಿ ನೀಡಲಾಗುವುದು.

LEAVE A REPLY

Please enter your comment!
Please enter your name here