ಪುತ್ತೂರು: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ.5ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
2023-2024ನೇ ಸಾಲಿನಲ್ಲಿ ಸಂಘ 34, 546.75 ರೂ ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ 0.27 ಪೈಸೆ ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ ಹೇಳಿದರು.
ವರದಿ ವರ್ಷದಲ್ಲಿ ಸಂಘ 329 ಸದಸ್ಯರಿಂದ 68,750 ರೂ. ಪಾಲು ಬಂಡವಾಳ ಹೊಂದಿದೆ. ವರದಿ ವರ್ಷದಲ್ಲಿ ಒಟ್ಟು 1,69,560.20 ಲೀಟರ್ ಹಾಲು ಖರೀದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ಸಿಗುವ ವಿವಿಧ ಯೋಜನೆಗಳನ್ನು ಸದಸ್ಯರಿಗೆ ತಿಳಿಸಿ ಸಂಘದಲ್ಲಿ ಹೆಚ್ಚು ಹಾಲು ಸಂಗ್ರಹಿಸುವುದು ನಮ್ಮ ಗುರಿ ಎಂದು ಜಗನ್ನಾಥ ಶೆಟ್ಟಿ ಹೇಳಿದರು.ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು.
ಈ ವರ್ಷದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿ ಪ್ರಥಮ ಸ್ಥಾನ ಪಡೆದ ನಾರಾಯಣ ಶೆಟ್ಟಿ ಗುತ್ತಿನಮನೆ, ದ್ವಿತೀಯ ಸ್ಥಾನ ಪಡೆದ ಲೀಲಾವತಿ ಮತ್ತು ತೃತೀಯ ಸ್ಥಾನ ಗಳಿಸಿದ ವೀರಪ್ಪ ಪೂಜಾರಿ ಡೆಕ್ಕಾಜೆ ಅವರನ್ನು ಸನ್ಮಾನಿಸಲಾಯಿತು. ಮತ್ತು ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉಪಾಧ್ಯಕ್ಷ ಕೇಶವ ಗೌಡ ಬರಮೇಲು, ನಿರ್ದೇಶಕರಾದ ವಿಜಯಲಕ್ಷ್ಮಿ ಆರ್. ನಾಯಕ್ ನಿಡ್ಯ, ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ, ಅಶೋಕ್ ಗೌಡ ಬಾರಿಕೆ, ಚಂದ್ರಶೇಖರ್ ರೈ ಕೆದಿಕಂಡೆ, ರತ್ನವರ್ಮ ಆಳ್ವ ಮಿತ್ತಳಿಕೆ, ರೇಣುಕಾ ಎಂ. ರೈ ಮಠಂತಬೆಟ್ಟು, ಲೀಲಾವತಿ ನಾಯ್ಕ, ಬಾಬು ಆಚಾರ್ಯ ಕೊಂಬಕೋಡಿ ಮತ್ತು ಎಲ್ಯಣ್ಣ ಗೌಡ ಉಪಸ್ಥಿತರಿದ್ದರು.
ಹರಿಣಾಕ್ಷಿ ಪ್ರಾರ್ಥಿಸಿ, ಸಿಬ್ಬಂದಿ ನಾರಾಯಣ ಸಾಗತಿಸಿದರು. ಕಾರ್ಯದರ್ಶಿ ರಮೇಶ್ ಪೂಜಾರಿ ವರದಿ ವಾಚಿಸಿದರು. ಸಂಘದ ನಿರ್ದೇಶಕ ಸಂತೋಷ್ ಕುಮಾರ್ ರೈ ಕೆದಿಕಂಡೆ ವಂದಿಸಿದರು. ಸಹಾಯಕಿ ಕವಿತಾ ಸಹಕರಿಸಿದರು. ಸಭೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಜಯಾನಂದ ಕೆ, ಲೀಲಾವತಿ ಎಲ್. ಗೌಡ, ರೇವತಿ ವೀರಪ್ಪ ಪೂಜಾರಿ ಡೆಕ್ಕಾಜೆ, ಮಾಜಿ ಕಾರ್ಯದರ್ಶಿಗಳಾದ ಬನ್ನೂರು ರೈತರ ಸೇವಾ ಸಂಘದ ನಿರ್ದೆಶಕ ಸುಭಾಷ್ ನಾಯಕ್ ನೆಕ್ಕರಾಜೆ ಸೇರಿದಂತೆ ನೂರಾರು ಸದಸ್ಯರು ಭಾಗವಹಿಸಿದ್ದರು.