ಅಂತರಗುತ್ತು ’ಫ್ರೆಂಡ್ಸ್ ಟ್ರೋಫಿ’ ಕಬಡ್ಡಿ ಪಂದ್ಯಾಟ-ರಾಮಕುಂಜ ಕ.ಮಾ.ಶಾಲಾ ಬಾಲಕರ ತಂಡ ಪ್ರಥಮ

0

ರಾಮಕುಂಜ: ಫ್ರೆಂಡ್ಸ್ ಅಂತರಗುತ್ತು ಟ್ರಸ್ಟ್ ಹಾಗೂ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ವತಿಯಿಂದ ಅಂತರಗುತ್ತುನಲ್ಲಿ ನಡೆದ ಹೊನಲು ಬೆಳಕಿನ ಪ್ರೌಢಶಾಲಾ ವಿಭಾಗದ ಬಾಲಕರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ’ಫ್ರೆಂಡ್ಸ್ ಟ್ರೋಪಿ-2024’ರಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

  • ತಂಡದ ಮಹಾಂತೇಶ್ ಬೆಸ್ಟ್ ರೈಡರ್ ಹಾಗೂ ಸಂದೀಪ್ ಬೆಸ್ಟ್ ಡಿಪೆಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಮಾಧವ ಬಿ.ಕೆ., ಜಸ್ವಂತ್ ಹಾಗೂ ಮಂಜುನಾಥ್ ತರಬೇತಿ ನೀಡಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯಗುರು ಸತೀಶ್ ಭಟ್, ಶಾಲಾ ಶಿಕ್ಷಕ ವೃಂದವರು, ಆಡಳಿತ ಮಂಡಳಿಯವರು, ಶಾಲಾ-ಪೋಷಕರು, ಹಿರಿಯ ವಿದ್ಯಾರ್ಥಿಗಳು ಸಹಕರಿಸಿದ್ದರು.

LEAVE A REPLY

Please enter your comment!
Please enter your name here