ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ಶ್ರೀ ಸಿದ್ದಿವಿನಾಯಕ ಸೇವಾ ಸಂಘದ ವತಿಯಿಂದ ನಡೆದ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಿದ್ದಿವಿನಾಯಕ ಸಭಾಭವನದಲ್ಲಿ ನಡೆಯಿತು.
ಅರ್ಚಕ ಕೇಶವ ಕಲ್ಲೂರಾಯ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು.ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಯೋಜಕ ಮೋಹನ್‌ದಾಸ್ ರೈ ಬಲ್ಕಾಡಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ
ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಇದರ ವತಿಯಿಂದ ಪಾಲ್ತಾಡಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅಶ್ವಿಕಾ ಬಿ. ರೈ ಬೈಲಾಡಿ ,ಕೌಶಿತಾ ಪಿ.ಎನ್ ಪಾಣೆ,ದೀಕ್ಷಾ ಎ. ಅಂಗಡಿಮೂಲೆ,ಬೃಂದಾ ಕೆ. ಕುಂಜಾಡಿ, ಪ್ರಿಯಾಂಕ ಬಿ. ಮಂಜುನಾಥನಗರ,ತ್ರಿಷಾ ರೈ ಬಿ. ನೆಲ್ಯಾಜೆ,ಪಿ.ವಿ.ಧನ್ಯಾ ಪಂಚೋಡಿ,ನಂದನ್ ಕುಮಾರ್ ಬಿ.ಜೆ. ಜಾರಿಗೆತಡಿ,ಶರಣ್ಯಾ ಬಿ.ಎಸ್ ಬಂಬಿಲದೋಳ,ಶ್ರದ್ದಾ ಬಿ.ಬಂಬಿಲ,ಮೌಲ್ಯ ಪರಣೆ,ಮುಖೇಶ್ ಶೆಟ್ಟಿ ಬರೆಮೇಲು,ವೀಣಾ ಶ್ರೀ ಅಂಗಡಿಮೂಲೆ,ತನುಷ್ ಬಂಬಿಲ,ಶ್ರೀಜಾ ಬಿ.ಪಿ.ಬಂಬಿಲ,ದಿಲೀಪ್ ಕುಮಾರ್ ಚೆನ್ನಾವರ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ, ಹರಿಕಲಾ ರೈ ,ಮಾಜಿ ಸದಸ್ಯರಾದ ಬಿ.ಕೆ.ರಮೇಶ್, ಬಾಳಪ್ಪ ಪೂಜಾರಿ, ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಸವಣೂರು ಪ್ರಾ.ಕೃ. ಪ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ವಿವೇಕಾನಂದ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ಅಧ್ಯಕ್ಷ ಹರೀಶ್ ರೈ ಮಂಜುನಾಥನಗರ, ಈಶ್ವರ ಕೆ.ಎಸ್.,ರಕ್ಷಿತ್,ನಿತ್ಯಪ್ರಸಾದ್,ದೀಕ್ಷಿತ್ ಮೊದಲಾದವರಿದ್ದರು.
ಸಿದ್ದಿವಿನಾಯಕ ಸೇವಾ ಸಂಘದ ಕಾರ್ಯದರ್ಶಿ ಉದಯ ಬಿ.ಆರ್ ಸ್ವಾಗತಿಸಿದರು. ಸಂದೀಪ್ ರೈ ಸಾಧಕರ ಪಟ್ಟಿ ವಾಚಿಸಿದರು. ವಿವೇಕಾನಂದ ಯುವಕ ಮಂಡಲದ ಕಾರ್ಯದರ್ಶಿ ಸತ್ಯಪ್ರಕಾಶ್ ಶೆಟ್ಟಿ ವಂದಿಸಿದರು. ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ.ಕಾರ್ಯಕ್ರಮ ನಿರೂಪಿಸಿದರು.