ಆಹ್ಲಾದಕರ ಸ್ವಾದದ ನೂತನ ʼವೇದಗಿರಿʼ ಚಹಾ ಹುಡಿ ಮಾರುಕಟ್ಟೆಗೆ ಲಗ್ಗೆ

0

ಪುತ್ತೂರು: ಕಳೆದ ಸುಮಾರು 45 ವರ್ಷಗಳಿಂತಲೂ ಹೆಚ್ಚು ಕಾಲ ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಪುತ್ತೂರು ತಾಲೂಕಿನಲ್ಲಿ ಮನೆ ಮಾತಾಗಿರುವ ʼಸಚಿನ್‌ ಟ್ರೇಡರ್ಸ್‌ʼ ಹೋಲ್‌ ಸೇಲ್‌ ಮತ್ತು ರಿಟೈಲ್ ಮಾರಾಟ ಮಳಿಗೆ ನೂತನ ʼವೇದಗಿರಿ ಟೀ ಹುಡಿʼಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

ನಾಡಿನ ವಿವಿಧ ವಲಯಗಳಿಂದ ಆಗಮಿಸಿದ ಅತಿಥಿ ಗಣ್ಯರಿಗೆ ʼವೇದಗಿರಿʼ ಟೀ ಹುಡಿ ಬಳಸಿ ಸ್ಥಳದಲ್ಲೇ ತಯಾರಿಸಿದ ಚಹಾ ನೀಡಿ ಸ್ವಾಗತಿಸಲಾಯಿತು. ದೇಶದ ಹಲವು ಪ್ರಮುಖ ಕಂಪೆನಿಗಳ ಉತ್ಪನ್ನಗಳಿಗೆ ಜಿಲ್ಲಾವಾರು ಮತ್ತು ತಾಲೂಕುವಾರು ಮಾರಾಟಗಾರರಾಗಿರುವ ಸಚಿನ್‌ ಟ್ರೇಡರ್ಸ್‌ ನೂತನ ʼವೇದಗಿರಿ ಟೀʼ ಹುಡಿಯ ಜಿಲ್ಲಾವಾರು ಹೋಲ್‌ ಸೇಲ್ ಮಾರಾಟಗಾರರಾಗಿದ್ದಾರೆ.

ಆರಂಭದಲ್ಲಿ ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ದೊಡ್ಡ ತರಿಯ ಟೀ ಹುಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ʼವೇದಗಿರಿʼ ಸಂಸ್ಥೆ, ಈ ಭಾಗದ ಜನರ ಬೇಡಿಕೆಯಂತೆ ಈಗ ಸಣ್ಣ ತರಿಯ ಟೀ ಹುಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ʼವೇದಗಿರಿʼ ಟೀ ಹುಡಿ ಬಳಸಿ ಮಾಡಲಾದ ಚಹಾ ಸವಿದ ಅತಿಥಿ ಗಣ್ಯರು ಟೀ ಹುಡಿಯ ಸ್ವಾದ ಮತ್ತದರ ಆಹ್ಲಾದಕರ ರುಚಿಯನ್ನು ಮುಕ್ತಕಂಠದಿಂದ ಪ್ರಶಂಶಿಸಿದ್ದು, ಸಚಿನ್‌ ಟ್ರೇಡರ್ಸ್‌ ಮಾಲಕ ಇಂಡಾಜೆ ಮಂಜುನಾಥ್‌ ನಾಯಕ್‌ ಅವರಿಗೆ ಶುಭ ಹಾರೈಸಿದರು. ಸದ್ಯ ನಾಡಿನ ಎಲ್ಲಾ ಸ್ಟೋರ್‌ ಗಳಲ್ಲಿ ʼವೇದಗಿರಿʼ ಚಹಾ ಹುಡಿ ಲಭ್ಯವಿದೆ ಎಂದು ಇಂಡಾಜೆ ಮಂಜುನಾಥ್‌ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here